»   » ಅಂಗವಿಕಲ ನಟ ಧ್ರುವಶರ್ಮಈಗ ರೈಟರ್

ಅಂಗವಿಕಲ ನಟ ಧ್ರುವಶರ್ಮಈಗ ರೈಟರ್

Subscribe to Filmibeat Kannada

ರೈಟರ್ ಇದು ವಿಶಿಷ್ಟ ಶೀರ್ಷಿಕೆ. ರೈಟರ್ ಎಂದರೆ ಬರಹಗಾರ ಎನ್ನುವುದು ಸಾಮಾನ್ಯ ಅರ್ಥ. ಆದರೆ ಕಳೆದವಾರ ಆರಂಭವಾಗಿರುವ ತಿಬ್ಬಾದೇವಿ ಕಂಬೈನ್ಸ್ ಅಡಿಯಲ್ಲಿ ದಿಯಾ ಪ್ರೊಡಕ್ಷನ್ಸ್ ಅವರ 'ರೈಟರ್' ಚಿತ್ರಕ್ಕೆ ಬೇರೆಯೆ ಅರ್ಥ ಇದೆ ಎನ್ನುತ್ತಾರೆ ನಿರ್ಮಾಪಕ ಸೋಮಶೇಖರ್.

ಸರಳ ಮುಹೂರ್ತ ಆಚರಿಸಿಕೊಂಡಿರುವ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಉದ್ಯಮಿ ದಿನೇಶ್ ಆರಂಭಫಲಕ ತೋರಿದರೆ ನಟ ಸ್ವಸ್ತಿಕ್ ಶಂಕರ್ ಕ್ಯಾಮೆರಾ ಚಾಲನೆ ಮಾಡಿದರು. ತೀರ್ಥಹಳ್ಳಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುವ ಚಿತ್ರಕ್ಕೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ ನಿರ್ದೆಶಕ ದಿಲೀಪ್‌ಕುಮಾರ್ ಸಂಭಾಷಣೆ ಬರೆಯುವ ಮೂಲಕ. ಆರಂಭದ ದಿನದಿಂದ ಚಿತ್ರಕ್ಕೆ ನಗರದ ಬಿ ಇ ಎಲ್ ರಸ್ತೆಯ ಖಾಸಗಿ ನಿವಾಸವೊಂದರಲ್ಲಿ ಭರದ ಚಿತ್ರೀಕರಣ ನಡೆಯುತ್ತಿದೆ.

ನಾಗೇಶ್‌ಆಚಾರ್ಯರ ಛಾಯಾಗ್ರಹಣವಿರುವ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ಸಂಯೋಜಿಸಿದ್ದಾರೆ. ನರಸಯ್ಯ ಸಂಕಲನ, ಕತೆ, ಸಹನಿರ್ದೇಶನ ಸಮುದ್ರಂ ಶ್ರೀನಿವಾಸ್, ನೆಲ್ಸನ್ ಶಂಕರ್ ನಿರ್ಮಾಣ ನಿಯಂತ್ರಣ, ಎ ವಿ ಎಂ ಚನ್ನಯ್ಯ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದಲ್ಲಿ ಸ್ನೇಹಾಂಜಲಿ ಮೂಲಕ ಅಭಿನಯಕ್ಕೆ ಅಡಿಯಿಟ್ಟ ಅಂಗವಿಕಲ ಧ್ರುವಶರ್ಮ ಶ್ರೀನಿವಾಸ್ ಶಂಕರ್ ಜೊತೆ ಅಭಿನಯಿಸಿದ್ದಾರೆ. ನಾಯಕಿಯನ್ನ್ನೊಳಗೊಂಡಂತೆ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಸ್ನೇಹಾಂಜಲಿ ದೆಸೆಯಿಂದ ಉದಯಿಸಿದ 'ಧ್ರುವ'ತಾರೆ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada