»   » ಮಿನಿಸ್ಟರ್ ಡರ್ಟಿ ಫಿಲ್ಮಂ ಸಿಡಿಗೆ ಭಾರಿ ಬೇಡಿಕೆ

ಮಿನಿಸ್ಟರ್ ಡರ್ಟಿ ಫಿಲ್ಮಂ ಸಿಡಿಗೆ ಭಾರಿ ಬೇಡಿಕೆ

Posted By:
Subscribe to Filmibeat Kannada

ವಿಧಾನಸೌಧದಲ್ಲಿ ಕದ್ದುಮುಚ್ಚಿ ಸಹಕಾರ ಸಚಿವರು ಅಶ್ಲೀಲ ಚಿತ್ರ ನೋಡುತ್ತಾ ಅಧ್ಯಯನ ನಡೆಸಿದ್ದು ಈಗ ಸಿಡಿ ರೂಪದಲ್ಲಿ ಹೊರ ಬಿದ್ದಿದೆ. ಬೆಂಗಳೂರಿನ ಕಾಳಸಂತೆಯಲ್ಲಿ ಕನಿಷ್ಠ 50 ರು ಬೆಲೆಗೆ ಒಂದು ಸಿಡಿಯಂತೆ ಮಾರಲಾಗುತ್ತಿದ್ದು, ಬಿಸಿಬಿಸಿ ದೋಸೆಯಂತೆ ಎಲ್ಲವೂ ಸೇಲ್ ಆಗುತ್ತಿದೆ.

ಅವಿನ್ಯೂ ರಸ್ತೆಯ ಇಕ್ಕಟ್ಟಾದ ಸಂದಿಗಳಲ್ಲಿ ಸಿಡಿಗಳು ಬಿಕರಿಯಾಗುತ್ತಿದ್ದು, ಸಿಡಿ ಮಾರಾಟ ಜಾಲ ಎಲ್ಲೆಡೆ ಹಬ್ಬುತ್ತಿದೆ. ಪೊಲೀಸರಿಗೆ ವಿಷಯ ತಿಳಿದು ಕಾರ್ಯಾಚರಣೆಗೆ ಇಳಿದರೂ ಸಿಡಿ ಮಾರಾಟಗಾರರ ಸುಳಿವು ಸಿಗುತ್ತಿಲ್ಲ.

ಮಿನಿಸ್ಟರ್ಸ್ ಡರ್ಟಿ ಪಿಕ್ಚರ್ಸ್ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿರುವ ಈ ಸಿಡಿಯಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ಬ್ಲೂ ಫಿಲ್ಮಂ ವೀಕ್ಷಿಸಿದ ದೃಶ್ಯಗಳಿದೆ. ಪಕ್ಕದಲ್ಲಿದ್ದ ಸಿಸಿ ಪಾಟೀಲರು ಆಗಾಗ ಇಣುಕಿ ನೋಡುತ್ತಿದ್ದ ದೃಶ್ಯಗಳಿದೆ. ಜೊತೆಗೆ ಬೋನಸ್ ರೀತಿಯಲ್ಲಿ ಮೊಬೈಲ್ ಫೋನ್ ನಲ್ಲಿ ಕಂಡ ಬ್ಲೂ ಫಿಲ್ಮಂನ ಪೂರ್ಣ ಚಿತ್ರ ಕೂಡಾ ಲಭ್ಯವಿದೆ.

ಸಿಡಿ ಬೇಡಿಕೆ ಹೆಚ್ಚುತ್ತಲೇ ಇದ್ದು, ಸಂಜೆ ವೇಳೆಗೆ ಎರಡನೇ ಆವೃತ್ತಿಯ ಸಿಡಿ ಹೊರಬರುವ ಸಾಧ್ಯತೆ ನಿರೀಕ್ಷೆಗಳಿದೆ.

English summary
Karnataka BJP Minister Lakshman Savidi watching Dirty Film in assembly has been released in the form of CD and huge demand in Bangalore today(Feb.8). The three accused BJP Ministers are already resigned but the demand for CD is growing.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X