»   » ಕವಿತಾ ಲಂಕೇಶ್ ರ ಹೊಸ ಚಿತ್ರದಲ್ಲಿ ಶಿವಣ್ಣ

ಕವಿತಾ ಲಂಕೇಶ್ ರ ಹೊಸ ಚಿತ್ರದಲ್ಲಿ ಶಿವಣ್ಣ

Subscribe to Filmibeat Kannada
Kavitha Lankesh
''ಸ್ಕ್ರಿಪ್ಟ್ ಸಿದ್ಧವಾಗಿದೆ, ಚಿತ್ರಕಥೆ ಸಿದ್ಧಪಡಿಸಿಕೊಳ್ಳುತ್ತಿದ್ದೇನೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ನಿರ್ಮಾಪಕರಿಗೆ ಅವರು ಕಾಲ್ ಷೀಟ್ ಕೊಡುವುದೊಂದು ಬಾಕಿ ಇದೆ. ಬರುವ ಏಪ್ರಿಲ್ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ.'' ಎಂದು ನಿರ್ದೇಶಕಿ ಕವಿತಾ ಲಂಕೇಶ್ ಅವರು ತಮ್ಮ ಹೊಸ ಚಿತ್ರದ ಬಗ್ಗೆ ವಿವರ ನೀಡಿದರು.

ಈಗಾಗಲೇ ಅವರು ತಮ್ಮ ಚೊಚ್ಚಲ ಚಿತ್ರ'ದೇವೀರಿ'ಮೂಲಕ ತಾವೊಬ್ಬ ಪ್ರತಿಭಾವಂತ ನಿರ್ದೇಶಕಿ ಎಂಬುದನ್ನು ನಿರೂಪಿಸಿಕೊಂಡಿದ್ದಾರೆ. ನಂತರ ಬಂದ ಬಿಂಬ,ಅಲೆಮಾರಿ,ಪ್ರೀತಿ ಪ್ರೇಮ ಪ್ರಣಯ, ತನನಂ ತನನಂ, ಅವ್ವ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ತಮ್ಮದೇ ಆದ ಪ್ರೇಕ್ಷಕ ವಲಯವನ್ನು ಸೃಷ್ಟಿಸಿಕೊಂಡವರು. ಪ್ರಸ್ತುತ ಕಸ್ತೂರಿ ವಾಹಿನಿಯ ಮೆಘಾ ಧಾರಾವಾಹಿ 'ನೀ ನಡೆವ ಹಾದಿ..' ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಈಗವರು ಶಿವರಾಜ್ ಕುಮಾರ್ ಚಿತ್ರವನ್ನು ಕೈಗೆತ್ತಿಕೊಂಡಿರುವುದು ಚಿತ್ರೋದ್ಯಮದಲ್ಲಿ ಆಸಕ್ತಿ ಕೆರಳಿಸಿದೆ.

ಅವರ ನಿರ್ದೇಶನಕ್ಕೆ ಅರವಿಂದ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.ಈ ಹಿಂದೆ ಅವರು ನಿರ್ದೇಶಿಸಿದ ಚಿತ್ರಗಳಲ್ಲಿ ಪ್ರತಿಭಾವಂತ ಕಲಾವಿದರಾದ ಪ್ರಕಾಶ್ ರೈ,ಭಾವನಾ, ಅನಂತ್ ನಾಗ್,ಭಾರತಿ ವಿಷ್ಣುವರ್ಧನ್, ವಿಜಯ್, ಶ್ರುತಿ, ಗಿರೀಶ್ ಕಾರ್ನಾಡ್ ಮುಂತಾದವರು ನಟಿಸಿದ್ದರು. ಇದೇ ಪ್ರಥಮ ಬಾರಿಗೆ ಕವಿತಾ ಲಂಕೇಶ್ ಮಾಸ್ ಹೀರೋ ಶಿವರಾಜ್ ಕುಮಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಉಳಿದ ತಾರಾಗಣದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada