twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

    By Rajendra
    |

    ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಮುನ್ನ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದು ನವೆಂಬರ್ 8 ರಿಂದ ನವೆಂಬರ್ 20ರವರೆಗೆ 13 ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ. ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವ ನವೆಂಬರ್ 22ರಿಂದ ಆರಂಭವಾಗಲಿದೆ.

    ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ, ನೃಪತುಂಗ ರಸ್ತೆಯ ಯವನಿಕಾ ಮತ್ತು ಮಲ್ಲೇಶ್ವರಂನ ಸೇವಾ ಸದನದಲ್ಲಿ ವಿವಿಧ ಭಾಷೆಯ ಸರಿಸುಮಾರು 100 ಚಿತ್ರಗಳು ಪ್ರದರ್ಶನ ಕಾಣಲಿವೆ. ಕನ್ನಡದ ಎರಡು ಚಿತ್ರಗಳು 'ಸುಬ್ಬಶಾಸ್ತ್ರಿ' ಮತ್ತು 'ಮಿಸ್ ಲೀಲಾವತಿ' ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಲಿವೆ.

    ಮೆಟ್ರೋ ನಗರಗಳಿಂದಾಚೆಗೂ ಚಲನಚಿತ್ರಗಳನ್ನು ಕೊಡೊಯ್ಯಬೇಕು ಎಂಬುದು ಈ ಚಲನಚಿತ್ರೋತ್ಸವದ ಧ್ಯೇಯೋದ್ದೇಶವಾಗಿದೆ. ಬೀದರ್, ಧಾರವಾಡ, ಶಿವಮೊಗ್ಗ ಮತ್ತು ಮಂಗಳೂರಿಗೂ ಚಲನಚಿತ್ರೋತ್ಸವನ್ನು ವಿಸ್ತರಿಸುವ ಗುರಿಯನ್ನು ಚಲನಚಿತ್ರ ಅಕಾಡೆಮಿ ಹೊಂದಿರುವುದಾಗಿ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ ತಿಳಿಸಿದ್ದಾರೆ.

    English summary
    Karnataka Chalanachitra Academy – International Film Festival is scheduled in Bangalore from November 8 to 20 at three different places 100 films in which two Kannada, Telugu, Tamil and international languages will be screened for the public.
    Monday, December 12, 2011, 11:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X