ಸಂತೋಷದಲ್ಲಿ ವಿಷ್ಣುವರ್ಧನ ನೋಡಿದ ಕೆಸಿಎನ್ ಗೌಡ್ರು
ಹಿರಿಯ ಜೀವ ಕೆ.ಸಿ.ಎನ್. ಗೌಡ ಸಂತೋಷ್ ಥಿಯೇಟರ್‌ನಲ್ಲಿ! ಎಂಬತ್ತರ ಹರೆಯದ ಹಿರಿಯ ನಿರ್ಮಾಪಕ ಕೆ.ಸಿ.ಎನ್. ಗೌಡರು ಸಿನಿಮಾ ನೋಡೋಕೆ ಬರೋದಂದ್ರೆ ಅಂದ್ರೆ ಏನು? ಅದೂ ನೂರಾರು ಜನ ಕೂರೋದು ಅಂದ್ರೆ ಏನು? ಏನ್ ತಮಾಷೆ ಮಾಡ್ತೀರಾ?
ಹೀಗೆ ಖಂಡಿತ ಕಾಮೆಂಟ್ ಮಾಡಬೇಡಿ. ಬಟ್ ಈ ಸುದ್ದಿ ನಿಜ. ಕೆ.ಸಿ.ಎನ್. ಗೌಡ ಅವರು ವಿಷ್ಣುವರ್ಧನ ಚಿತ್ರ ವೀಕ್ಷಿಸಲು ಸಂತೋಷ್ ಚಿತ್ರಮಂದಿರಕ್ಕೆ ಬಂದಿದ್ದರು. ಎಲ್ಲರ ಮಧ್ಯೆ ಕೂತು ವಿಷ್ಣುವರ್ಧನ ಚಿತ್ರವನ್ನು ನೋಡಿ ಎಂಜಾಯ್ ಮಾಡಿದರು. ದ್ವಾರಕೀಶ್ ಇತ್ತ ಆಹ್ವಾನಕ್ಕೆ ಮನ್ನಣೆ ನೀಡಿ ಎಲ್ಲರ ಮಧ್ಯೆ ಕೂತು ಚಿತ್ರ ವೀಕ್ಷಿಸಿದರು.
ಈ ಮಧ್ಯೆ ಎಲ್ಲಿ ವಿಷ್ಣುವರ್ಧನ ಚಿತ್ರದಿಂದ ಯರ್ರಾಬಿರ್ರಿ ಓಡುತ್ತಿರುವ, ತಾವೇ ಅರ್ಪಿಸಿರುವ ಸಾರಥಿ ಚಿತ್ರಕ್ಕೆ ಎಲ್ಲಿ ಹೊಡೆತ ಬೀಳುತ್ತದೋ? ಕಲೆಕ್ಷನ್ ಎಲ್ಲಿ ಕಡಿಮೆಯಾಗುತ್ತದೋ ಎಂಬ ಅನುಮಾನಕ್ಕೆ ಪರಿಹಾರ ಹುಡುಕುವ ಸಲುವಾಗಿ ಸಿನಿಮಾ ನೋಡಲು ಬಂದಿರಬಹುದಾ ಎಂಬ ಮಾತೂ ಅಲ್ಲೇಲ್ಲೋ ಮೂಲೆಯಿಂದ ಕೇಳಿಬರುತ್ತಿತ್ತು! (ಒನ್‌ಇಂಡಿಯಾ ಕನ್ನಡ)
More from Filmibeat
English summary
Kannada films senior producer KCN Gowda took time off from his busy schedule to watch the Kannada movie, ‘Vishnuvardhana’ on Thursday morning. The film - starring Actor Sudeep, Priyamani, Bhavana, Sonu Sood, Dwarakish, Arunkumar, Achyuthkumar has been directed by P Kumar.


Click it and Unblock the Notifications











