ನಾಡಹಬ್ಬ ದಸರಾಗೆ ತ್ರಿಭಾಷಾ ಚಿತ್ರ ಕಾಫಿ ಶಾಪ್
ಬ್ಲೂ ಫಾಕ್ಸ್ ಸಿನಿಮಾ ಲಾಂಛನದಲ್ಲಿ ನಿರ್ಮಾಣವಾಗಿರುವ 'ಕಾಫಿ ಶಾಪ್' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ನಾಡಹಬ್ಬ ದಸರಾ ವೇಳೆಗೆ ಬಿಡುಗಡೆಯಾಗಲಿದೆ.
ಕನ್ನಡ, ತಮಿಳು ಹಾಗೂ ತೆಲಗು ಭಾಷೆಯಲ್ಲೂ ನಿರ್ಮಾಣವಾಗಿರುವ 'ಕಾಫಿ ಶಾಪ್' ಚಿತ್ರ ಆಂಗ್ಲ ಹಾಗೂ ಹಿಂದಿ ಭಾಷೆಗೆ ಡಬ್ ಆಗುತ್ತಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಗೀತಾಕೃಷ್ಣ ತಿಳಿಸಿದ್ದಾರೆ.ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಂಗೀತ ನೀಡಿದ್ದಾರೆ.
ಕಾಫಿ ಶಾಪ್ ಚಿತ್ರದಲ್ಲಿ ಶಶಾಂಕ್ ಹಾಗೂ ಬಿಯಾಂಕ ದೇಸಾಯಿ ನಾಯಕ, ನಾಯಕಿಯರಾಗಿ ನಟಿಸಿದ್ದಾರೆ. ಗಿರೀಶ್ ಕಾರ್ನಾಡ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಮುರಳಿ, ರಘು ಅವರ ಛಾಯಾಗ್ರಹಣವಿದೆ.
ಕಾಫಿ ಶಾಪ್ ಗೀತಾ ಕೃಷ್ಣ ಶಶಾಂಕ್ ಬಿಯಾಂಕಾ ದೇಸಾಯಿ geetha krishna koffi shop girish karnad shashank biyanka desai


Click it and Unblock the Notifications