ಸಮಾನತೆಯ ಸಾರುವ ‘ವಿಸ್ಮಯ ಪ್ರಣಯ’
ಲೋಕದಲ್ಲಿ ಹೆಣ್ಣಿಗಿಂತ ಗಂಡಿಗೆ ಸ್ವಾತಂತ್ರ್ಯ ಹೆಚ್ಚು ಎಂಬ ಮಾತು ರೂಢಿಯಲ್ಲಿದೆ. ಆದರೆ ಹೆಣ್ಣು ಗಂಡಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂದು ಸಾರುತ್ತಾನೆ ಚಿತ್ರದ ಕಥಾನಾಯಕ. ನಾಯಕನಿಗೆ ಅರುಣೋದಯ ಸಮಯಕ್ಕೆ ಎದ್ದು ಕಾಫಿ ಕುಡಿಯುವ ಅಭ್ಯಾಸ. ಎದ್ದ ಕೂಡಲೇ ಅಡುಗೆ ಮನೆಗೆ ಆಗಮಿಸಿದ ಆ ಮನೆಯ ಅಳಿಯ ಕಾಫಿ ಮಾಡಿಕೊಳ್ಳಲು ಮುಂದಾದಾಗ ಅಲ್ಲಿಗೆ ಆಗಮಿಸಿದ ಅತ್ತೆ 'ನೀವು ಏಕೆ ಕಾಫಿ ಮಾಡಿಕೊಳ್ಳುತ್ತಿದ್ದೀರಾ ನನ್ನ ಮಗಳು ಬಂದು ಮಾಡಿಕೊಡುತ್ತಾಳೆ ಬಿಡಿ ಎನ್ನುತ್ತಾರೆ.
ಮುಂದುವರಿದು ಇದು ಅವಳ ಧರ್ಮಅಂದಾಗ ಇದೆಲ್ಲಾ ಹೆಂಡತಿನೇ ಮಾಡಿಬೇಕೆಂದು ಏನಿಲ್ಲ. ನನ್ನ ದೃಷ್ಟಿಯಲ್ಲಿ ಗಂಡು-ಹೆಣ್ಣು ಇಬ್ಬರು ಸಮಾನರು ಎಂದು ಅತ್ತೆಯ ಮುಂದೆ ಅಳಿಯ ಹೇಳುವ ಸನ್ನಿವೇಶವನ್ನು 'ವಿಸ್ಮಯ ಪ್ರಣಯ"ಚಿತ್ರಕ್ಕಾಗಿ ನಿರ್ದೇಶಕ ಮೋಹನ್ ಮಲ್ಲಪಳ್ಳಿ ನಂಜನಗೂಡಿನ ಖಾಸಗಿ ನಿವಾಸವೊಂದರಲ್ಲಿ ಚಿತ್ರೀಕರಿಸಿಕೊಂಡರು. ಹೇಮಾಚೌಧರಿ ಹಾಗೂ ನಾಯಕ ರಾಜ್‌ಸಾಗರ್ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ರಾಜ್‌ಸಾಗರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ವಿಸ್ಮಯ ಪ್ರಣಯ" ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ರಾಜ್‌ಸಾಗರ್ ಚಿತ್ರಕ್ಕೆ ಕಥೆ ಬರೆದಿರುವುದಲ್ಲದೆ, ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮೋಹನ್ ಮಲ್ಲಪಳ್ಳಿ ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ, ಕೆ.ವಿಶ್ವನಾಥ್ ಸಂಗೀತ, ಮ್ಯಾಥ್ಯೂರಾಜನ್ ಛಾಯಾಗ್ರಹಣ, ಗಿರೀಶ್‌ಕುಮಾರ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ಹಾಗೂ ಬಿ.ಕೃಷ್ಣ ಅವರ ನಿರ್ಮಾಣ ನಿರ್ವಹಣೆ 'ವಿಸ್ಮಯ ಪ್ರಣಯ' ಚಿತದ ತಾರಾಬಳಗದಲ್ಲಿ ರಾಜ್‌ಸಾಗರ್, ಮಯೂರಿ, ಕಾವ್ಯಶ್ರೀ, ಹೇಮಾಚೌಧರಿ, ಇಂದ್ರನ್, ರಾಮಿರೆಡ್ಡಿ, ಅಪೂರ್ವ, ಕರಿಬಸವಯ್ಯ, ರೇಖಾದಾಸ್, ಮಿಮಿಕ್ರಿ ರಾಜ್‌ಗೋಪಾಲ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











