ಬಾಕ್ಸ್ ಆಫೀಸ್ ನಲ್ಲಿ ಪರಮಾತ್ಮ ಹಿಂದೆ ಸಾರಥಿ ಮುಂದೆ

Puneet Darshan
ಚಾಲೇಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿದ್ದಾಗಲೇ ಬಿಡುಗಡೆಯಾದ 'ಸಾರಥಿ' ಚಿತ್ರ, ಸ್ಯಾಂಡಲ್ ವುಡ್ ನಲ್ಲಿ ಈ ಮಟ್ಟಿಗೆ ಮ್ಯಾಜಿಕ್ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಬಹುನಿರೀಕ್ಷತ ಚಿತ್ರ ಪುನಿತ್ ಮತ್ತು ಯೋಗರಾಜ್ ಭಟ್ಟರ 'ಪರಮಾತ್ಮ' ಈ ವರ್ಷದ ಸೂಪರ್ ಹಿಟ್ ಚಿತ್ರ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ...

ಸಾರಥಿ, ಪರಮಾತ್ಮನನ್ನು ಮೀರಿ ಯಶಸ್ವಿಯಾಗಿದೆ ಎಂಬುದು ಅಂಕಿ-ಅಂಶಗಳ ಸಮೇತ ಜಗಜ್ಜಾಹೀರಾಗಿದೆ. ಬಿಡುಗಡೆಗೂ ಮೊದಲೇ, ಟಿವಿ ರೈಟ್ಸ್ 3.5 ಕೋಟಿ ಹಾಗೂ ಆಡಿಯೋ ರೈಟ್ಸ್ 77 ಲಕ್ಷ ರೂಪಾಯಿಗಳ ಮಾರಾಟ ಕಂಡು ದಾಖಲೆ ಮೆರೆದಿತ್ತು ಪರಮಾತ್ಮ. ಆದರೆ ಸಾರಥಿ ಟಿವಿ ರೈಟ್ಸ್ 1.8 ಕೋಟಿ ಹಾಗೂ ಆಡಿಯೋ 20 ಲಕ್ಷ ರೂಪಾಯಿಗಳ ವ್ಯಾಪಾರ ಮಾತ್ರ ಕಂಡಿತ್ತು.

ಬಿಡುಗಡೆಯ ನಂತರ ತಿಂಗಳ ವರದಿಯ ಪ್ರಕಾರ, ಪರಮಾತ್ಮ 8 ಕೋಟಿ ರು. ಬಾಕ್ಸ್ ಆಫೀಸ್ ಗಳಿಕೆ ಹೊಂದಿದ್ದರೆ ಸಾರಥಿ 10 ಕೋಟಿ ರು. ಮೀರಿದೆ. ಕರ್ನಾಟಕದಾದ್ಯಂತ, ಸಾರಥಿ 139 ಹಾಗೂ ಪರಮಾತ್ಮ 94 ಥಿಯೇಟರುಗಳಲ್ಲಿ ಪ್ರದರ್ಶನವಾಗುತ್ತಿವೆ. ಸಾರಥಿ 100 ದಿನ ಓಡುವಷ್ಟರಲ್ಲಿ ರು. 20 ಕೋಟಿ ಗಳಿಕೆ ಕಾಣಲಿದೆ.

ಆಶ್ಚರ್ಯವೆಂದರೆ ಇದೇ ಮೊದಲ ಬಾರಿಗೆ 'ಮಾಸ್ ಸ್ಟಾರ್' ದರ್ಶನ್ ಚಿತ್ರಕ್ಕೆ ಪ್ಯಾಮಿಲಿ ಪ್ರೇಕ್ಷಕರು ಮುಗಿಬೀಳುತ್ತಿದ್ದಾರೆ. ಶೇ. 50 ಕ್ಕಿಂತ ಹೆಚ್ಚು ಮಹೀಳಾ ಪ್ರೇಕ್ಷಕರೇ ಥಿಯೇಟರಿಗೆ ಬರುತ್ತಿರುವುದು ಆಶ್ಚರ್ಯ ತಂದಿದೆ. ಸ್ಯಾಂಡಲ್ ವುಡ್ ನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆಯೇ? (ಒನ್ ಇಂಡಿಯಾ ಕನ್ನಡ)

More from Filmibeat

English summary
Sarathi Collection is more than Paramathma in Box Office. Number of Screens, Sarathi is 139 and Paramathma is only 94 all over the Karnataka.
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X