ಬಾಲಿವುಡ್‌ಗೆ ಪ್ರಕಾಶ್ ರೈ ಚೊಚ್ಚಲ ಕೂಸು

By Rajendra

ಇತ್ತೀಚೆಗೆ ತಾನೆ ನೃತ್ಯ ನಿರ್ದೇಶಕಿ ಪೋನಿ ವರ್ಮಾರನ್ನು ವರಿಸುವ ಮೂಲಕ ನೂತನ ದಾಂಪತ್ಯಕ್ಕೆ ಅಡಿಯಿಟ್ಟ ಪ್ರಕಾಶ್ ರೈ ಹಿಂದಿ ಚಿತ್ರವನ್ನು ನಿರ್ದೇಶಿಸುವ ಕನಸು ಹೊತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನದ 'ನಾನು ನನ್ನ ಕನಸು' ಯಶಸ್ಸು ಅವರನ್ನು ಬಾಲಿವುಡ್ ಅಂಗಳಕ್ಕೆ ತಂದು ನಿಲ್ಲಿಸಿದೆ.

'ನಾನು ನನ್ನ ಕನಸು' ಚಿತ್ರಕ್ಕೆ ಅದ್ಭತ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈಗಾಗಲೆ 125 ದಿನಗಳನ್ನು ಪೂರೈಸಿದೆ. ತಮಿಳು(ಅಭಿಯುಂ ನಾನುಂ),ತೆಲುಗಿನಲ್ಲಿ (ಆಕಾಶಮಂತ)ಯಶಸ್ವಿಯಾದ ಬಳಿಕ ಪ್ರಕಾಶ್ ರೈ ಈ ಚಿತ್ರವನ್ನು ಕನ್ನಡಕ್ಕೆ ತಂದಿದ್ದರು. ಈಗ ಹಿಂದಿ ಭಾಷೆಗೆ ಕೊಂಡೊಯ್ಯುತ್ತಿದ್ದಾರೆ.

ಚಿತ್ರದ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಪ್ರಕಾಶ್ ರೈ ಆಕ್ಷನ್, ಕಟ್ ಹೇಳುವುದರ ಜೊತೆಗೆ ಅಭಿನಯಿಸಲಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಚಿತ್ರಗಳಿಗೆ ಉತ್ತರ ಭಾರತ ಮೂಲದವರನ್ನು ನಾಯಕ ನಟನಾಗಿ ತೋರಿಸಲಾಗಿತ್ತು. ಆದರೆ ಹಿಂದಿಯಲ್ಲಿ ದಕ್ಷಿಣ ಭಾರತ ನಟನನ್ನು ನಾಯಕನನ್ನಾಗಿ ತೋರಿಸಲಾಗುತ್ತದೆ ಎನ್ನುತ್ತವೆ ಮೂಲಗಳು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X