For Quick Alerts
  ALLOW NOTIFICATIONS  
  For Daily Alerts

  ಬಿ ಸರೋಜಾ ದೇವಿ ಅವರಿಗೆ ಪ್ರತಿಷ್ಠಿತ ಎನ್ಟಿಆರ್ ಪ್ರಶಸ್ತಿ

  By Rajendra
  |

  2009ನೇ ಸಾಲಿನ ಪ್ರತಿಷ್ಠಿತ ಎನ್ಟಿಆರ್ ರಾಷ್ಟ್ರೀಯ ಪ್ರಶಸ್ತಿಗೆ ಖ್ಯಾತ ಅಭಿನೇತ್ರಿ ಡಾ.ಬಿ ಸರೋಜಾ ದೇವಿ ಅವರನ್ನು ಆಯ್ಕೆ ಮಾಡಲಾಗಿದೆ. ಆಂಧ್ರಪ್ರದೇಶ ಸರ್ಕಾರ ನೀಡುವ ಈ ಪ್ರತಿಷ್ಠಿತ ಪುರಸ್ಕಾರವು ರು.5 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ. ಭಾರತೀಯ ಸಿನಿಮಾಗೆ ಸಲ್ಲಿಸಿರುವ ಜೀವಮಾನ ಸಾಧನೆಗಾಗಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗುತ್ತಿದೆ.

  ಪ್ರಶಸ್ತಿಯನ್ನು ಡಿಸೆಂಬರ್ 12ರಂದು ಹೈದರಾಬಾದಿನಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಜಿ ಆದಿಶೇಷಗಿರಿ ರಾವ್ ಅವರು ಬಿ ಎನ್ ರೆಡ್ಡಿ ರಾಷ್ಟ್ರೀಯ ಪ್ರಶಸ್ತಿಗೆ ಖ್ಯಾತ ನಿರ್ದೇಶಕ ಕೆ ರಾಘವೇಂದ್ರ ರಾವ್ ಅವರನ್ನು ಆಯ್ಕೆ ಮಾಡಿದ್ದಾರೆ.

  ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತ್ ಅವರ 'ಮಹಾಕವಿ ಕಾಳಿದಾಸ'(1955) ಚಿತ್ರದ ಮೂಲಕ ಕನ್ನಡ ಬೆಳ್ಳಿ ಪರದೆಗೆ ಸರೋಜಾ ದೇವಿ ಅವರು ಅಡಿಯಿಟ್ಟಿದ್ದರು. ಅರುವತ್ತರ ದಶಕದಲ್ಲಿ ಅವರು ನಟಿಸಿದ ಚಿತ್ರಗಳು ಇಂದಿಗೂ ಚಿತ್ರರಸಿಕರ ಮೈ ಮನ ಪುಳಕಗೊಳಿಸುತ್ತವೆ.

  'ಕಿತ್ತೂರು ಚೆನ್ನಮ್ಮ' ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾ ದೇವಿ 'ಬಭ್ರುವಾಹನ' ಚಿತ್ರದಲ್ಲಿ ಚಿತ್ರಾಂಗದೆಯಾಗಿ ಪ್ರೇಕ್ಷಕರ ಮನಗೆದ್ದಿದ್ದರು. ಹೊಸ ಮತ್ತು ಹಳೆ ತಲೆಮಾರಿನ ಕಲಾವಿದರ ನಡುವಿನ ಕೊಂಡಿಯಾಗಿರುವ ಅಭಿನಯ ಸರಸ್ವತಿ, ಚತುರ್ಭಾಷಾ ತಾರೆ ಸರೋಜಾದೇವಿ ಅವರಿಗೆ ಅಭಿನಂದನೆಗಳು.

  English summary
  Veteran actress B. Saroja Devi has bagged the prestigious NTR National Award for the year 2009. It also carries a cash prize of Rs. 5 lakh. It is an award instituted by Andhra Pradesh government and is given for lifetime achievement and outstanding contribution to Indian cinema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X