ಸೂರಿ ಮುಂದಿನ ಚಿತ್ರದ ಸಂಭಾವನೆ ಒಂದು ಕೋಟಿ!
ಪುನೀತ್ ರಾಜ್ ಕುಮಾರ್ 'ಜಾಕಿ' ಬಾಕ್ಸಾಫೀಸಲ್ಲಿ ಜಯಭೇರಿ ಬಾರಿಸಿದ ಬಳಿಕ ನಿರ್ದೇಶಕ ಸೂರಿ ಸಂಭಾವನೆ ಸಿಕ್ಕಾಪಟ್ಟೆ ತುಟ್ಟಿಯಾಗಿದೆ. ಅವರ ಮುಂದಿನ ಚಿತ್ರಕ್ಕೆ ಸೂರಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೆ? ಸರಿಸುಮಾರು ಒಂದು ಕೋಟಿ ರುಪಾಯಿ ಎನ್ನುತ್ತವೆ ಮೂಲಗಳು!
ಇಷ್ಟಕ್ಕೂ ಅವರ ಮುಂದಿನ ಚಿತ್ರ ಯಾವುದು ಎಂಬುದು ತಾನೆ ನಿಮ್ಮ ಕುತೂಹಲ. ಈ ಬಾರಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಆಕ್ಷನ್, ಕಟ್ ಹೇಳಲಿದ್ದಾರೆ. ನಿರ್ದೇಶಕನ ಸಂಭಾವನೆಯೇ ಒಂದು ಕೋಟಿ ಎಂದರೆ ಇನ್ನು ಚಿತ್ರದ ಬಜೆಟ್ ಎಷ್ಟಿರಬಹುದು ಎಂಬುದನ್ನು ನೀವೇ ಊಹಿಸಿ!
ಇನ್ನೂ ಹೆಸರಿಡದ ಈ ಚಿತ್ರಕ್ಕೆ ಕೋಟಿ ಕೋಟಿ ಸುರಿಯುವ ನಿರ್ಮಾಪಕ ಯಾರಿರಬಹುದು? ಇನ್ಯಾರು ಇರಲಿಕ್ಕೆ ಸಾಧ್ಯ ಕೋಟಿ ನಿರ್ಮಾಪಕ ಎಂದೇ ಬಿರುದಾಂಕಿತ ರಾಮು. ಮುಂದಿನ ವರ್ಷ ಮಾರ್ಚ್ ವೇಳೆಗೆ ಈ ಚಿತ್ರ ಸೆಟ್ಟೇರಲಿದೆ. ಸದ್ಯಕ್ಕೆ ಸೂರಿ ಚಿತ್ರದ ಕತೆ ಹೆಣೆಯುವಲ್ಲಿ ಬ್ಯುಸಿಯಾಗಿದ್ದಾರೆ.
ಒಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ರೇಕ್‌ನ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದು ಕಡೆ ಸತತ ಸೋಲುಗಳಿಂದ ಕಂಗೆಟ್ಟಿರುವ ನಿರ್ಮಾಪಕ ರಾಮು ಪರಿಸ್ಥಿತಿಯೂ ಅದೇ. ಹಾಗಾಗಿ ಇಬ್ಬರಿಗೂ ದುನಿಯಾ ಸೂರಿ ಬ್ರೇಕ್ ನೀಡುವ ಚಿತ್ರವನ್ನು ಕೊಡಬೇಕಾಗಿದೆ.


Click it and Unblock the Notifications











