ಗಾಯಕ ರಾಜೇಶ್ ಕೃಷ್ಣನ್ ಗೆ ಮತ್ತೊಂದು ಮದುವೆ

Rajesh Krishnan
ಜನಪ್ರಿಯ ಹಿನ್ನೆಲೆ ಗಾಯಕ, ನಟ ರಾಜೇಶ್ ಕೃಷ್ಣನ್ ಮದುವೆ ಕಿರುತೆರೆ ನಟಿ, ಗಾಯಕಿ ರಮ್ಯಾ ವಸಿಷ್ಠ ಅವರೊಂದಿಗೆ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಜರುಗಿದೆ. ಅವರಿಗಿದು 3 ನೇ ಮದುವೆ. ಆಪ್ತರ ಸಮ್ಮುಖದಲ್ಲಿ ಅರ್ಚಕರ ನಿವಾಸದಲ್ಲಿ ಜರುಗಿದ ಈ ಶುಭಕಾರ್ಯಕ್ಕೆ ಸಾಕ್ಷಿಯಾಗಿದ್ದು ಅವರ ಆಪ್ತರು ಹಾಗೂ ಬಂಧುಗಳಷ್ಟೇ.

ಖ್ಯಾತ ಗಾಯಕಿ ಬಿ.ಕೆ. ಸುಮಿತ್ರಾ ಮಗಳು ಗಾಯಕಿ ಸೌಮ್ಯಾ ರಾವ್, ರಾಜೇಶ್ ಕೃಷ್ಣನ್ ಮೊದಲನೆ ಹೆಂಡತಿಯಾಗಿದ್ದರು. ಕಾನೂನು ಪ್ರಕಾರ ವಿಚ್ಛೇದನ ನೀಡಿ ಕಳೆದ ವರ್ಷ ದಂತವೈದ್ಯೆಯೊಬ್ಬರನ್ನು ಮದುವೆಯಾಗಿದ್ದ ರಾಜೇಶ್, ಕನ್ನಡದ ನಟಿಯೊಬ್ಬರನ್ನು ವಿವಾಹವಾಗಲಿದ್ದಾರೆಂಬ ಸುದ್ದಿ ಮೂರು ವರ್ಷಗಳಿಂದ ಹರಿದಾಡುತ್ತಲೇ ಇತ್ತು.

ಇದೀಗ ಕಿರುತೆರೆ ನಟಿ ರಮ್ಯಾ ಕೈ ಹಿಡಿಯುವ ಮೂಲಕ ಆ ಸುದ್ದಿಗೆ ಕತ್ತರಿ ಹಾಕಿದ್ದಾರೆ ರಾಜೇಶ್. ಹೀಗೆ ಒಂದರ ಹಿಂದೊಂದು ಮದುವೆಯಾಗುತ್ತಿರುವ ರಾಜೇಶ್, ನಿರ್ದೇಶಕ ದಿನೇಶ್ ಬಾಬು ಸಿನಿಮಾ ಶೀರ್ಷಿಕೆಗಳನ್ನು ನಿಜ ಮಾಡಲು ಹೊರಟಿದ್ದಾರಾ ಎಂಬ ಸಂಶಯ ಕಾಡುತ್ತದೆ. 'ಎರಡನೇ ಮದುವೆ' ನಂತರ ಇದೀಗ 'ಮತ್ತೊಂದ್ ಮದುವೆನಾ!' (ಒನ್ ಇಂಡಿಯಾ ಕನ್ನಡ)

More from Filmibeat

English summary
The most accomplished playback singers in the Southern industry Rajesh Krishnan wedding took place at Udupi district Kolluru on Monday (Nov 7) with singer Ramya vasista. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X