ಸೆನ್ಸಾರ್ ಮುಂದೆ ಪ್ರೀತಿಯಿಂದ ರಮೇಶ್
ರಮೇಶ್ ಅರವಿಂದ್ ಅಭಿನಯದ 'ಪ್ರೀತಿಯಿಂದ ರಮೇಶ್' ಚಿತ್ರದ ಪ್ರಥಮಪ್ರತಿ ಸಿದ್ಧವಾಗಿದ್ದು, ಸದ್ಯದಲೇ ಚಿತ್ರವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ ವೀಕ್ಷಿಸಲಿದೆ ಎಂದು ನಿರ್ಮಾಪಕ ಎನ್.ರವಿಕುಮಾರ್ ತಿಳಿಸಿದ್ದಾರೆ. ಈ ಚಿತ್ರವನ್ನು ಶಾಂತ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಿಸಲಾಗಿದೆ.
ಇದು ಇಂಟರ್ ನೆಟ್ ಯುಗ. ಮನುಷ್ಯ ತನಗೆ ಬೇಕಾದ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳುತ್ತಾನೆ. ನಾಯಕ ರಮೇಶ್ ಈ ಚಿತ್ರದಲ್ಲಿ ಸಾಫ್ಟ್ ವೇರ್ ಉದ್ಯೋಗಿ. ನಾಯಕ ತನ್ನ ಪ್ರೀತಿಯನ್ನು ಅಂತರ್ಜಾಲದ ಮೂಲಕ ಹುಡುಕುವುದೇ ಚಿತ್ರದ ಕಥಾ ಹಂದರ. ಹಲವು ಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಗುಣಕುಮಾರ್ ಈ ಚಿತ್ರದ ನಿರ್ದೇಶಕರು. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.
ಎ.ಸಿ.ಮಹೇಂದರ್ ಛಾಯಾಗ್ರಹಣ, ಎ.ಟಿ.ರವೀಶ್ ಸಂಗೀತ, ರವಿ ಸಂಕಲನ, ವಿಜಯ್‌ಪ್ರಸಾದ್ ಸಂಭಾಷಣೆ, ಕೆ.ಕಲ್ಯಾಣ್, ನಾಗೇಂದ್ರ ಪ್ರಸಾದ್ ಹಾಗೂ ಶಿವನಂಜೇಗೌಡರ ಗೀತರಚನೆಯಿರುವ ಚಿತ್ರದ ತಾರಾಬಳಗದಲ್ಲಿ ರಮೇಶ್, ರಮನೀತೋ ಚೌಧರಿ, ಸುಮಾಗುಹಾ, ಕಿರಣ್, ಅನಂತನಾಗ್ ಮುಂತಾದವರಿದ್ದಾರೆ.


Click it and Unblock the Notifications











