ಚಿತ್ರ ಬಿಡುಗಡೆಗೆ ನಿರ್ಮಾಪಕರಿಬ್ಬರ ಭಾರೀ ಜಟಾಪಟಿ

ಆದರೆ ನಿರ್ಮಾಪಕ ಮುನಿರತ್ನ ತಮ್ಮ ಕಠಾರಿವೀರ ಚಿತ್ರದ ಬಿಡುಗಡೆಯನ್ನು ಇದೇ ತಿಂಗಳು 27 ರಂದು (ಏಪ್ರಿಲ್ 27, 2012) ಘೋಷಿಸಿಕೊಂಡು ಭರ್ಜರಿ ಪ್ರಚಾರ ಕಾರ್ಯವನ್ನೂ ಈಗಾಗಲೇ ಪ್ರಾರಂಭಿಸಿದ್ದಾರೆ. ಇನ್ನೂ ಪ್ರಚಾರ ಕಾರ್ಯವಿರಲಿ, ಬಿಡುಗಡೆ ದಿನಾಂಕವನ್ನೂ ಘೋಷಿಸದ ಗಾಡ್ ಫಾದರ್ ಚಿತ್ರ ಅದಕ್ಕಿಂತ ಮೊದಲು ಬರಬೇಕೆಂಬ ವಾದವನ್ನು ಮುನಿರತ್ನ ಒಪ್ಪುತ್ತಿಲ್ಲ. ಇವರಿಬ್ಬರ ವಾದ-ವಿವಾದವೀಗ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ.
ಆಶ್ಚರ್ಯವೆಂದರೆ ನಿರ್ಮಾಪಕರಿಬ್ಬರೂ ಕಿತ್ತಾಡುತ್ತಿರುವ ಚಿತ್ರಗಳೆರಡರ ಹೀರೋ ಉಪೇಂದ್ರ. ಉಪೇಂದ್ರ ಚಿತ್ರಗಳೆರಡು ಒಂದೇ ದಿನ ಬಿಡುಗಡೆ ಆಗಿ ಉಪ್ಪಿ ವರ್ಸಸ್ ಉಪ್ಪಿ ಆಗದಿದ್ದರೆ ಸಾಕು ಎಂಬುದೀಗ ಉಪೇಂದ್ರ ಅಭಿಮಾನಿಗಳ ಅಳಲು. ಏಕೆಂದರೆ, ಕನ್ನಡದ ಇನ್ನೊಂದು ಬಿಗ್ ಬಜೆಟ್ ಚಿತ್ರ 'ಅಣ್ಣಾಬಾಂಡ್' ಕೂಡ ಅದೇ ವಾರ (ಏಪ್ರಿಲ್ 26, 2012) ಬಿಡುಗಡೆ ಆಗುತ್ತಿದೆ. ಮುಂದಿನ ಪುಟ ನೋಡಿ...
More from Filmibeat
English summary
Upendra Movie producers K Manju and Munirathna are in Release Controversy. God Father producer K Manju filed complaint against Katariveera Surasundarangi producer Munirthna in Film Chamber.


Click it and Unblock the Notifications











