ಪವರ್ ಸ್ಟಾರ್ ಪುನೀತ್ ಈಗ ಸಿಕ್ಸ್ ಪ್ಯಾಕ್ ಹೀರೋ
ಕನ್ನಡದಲ್ಲಿ ಚಾಕೊಲೇಟ್ ಹೀರೋಗಳು ಸಾಕಷ್ಟು ಮಂದಿ ಸಿಗುತ್ತಾರೆ. ಡೆಡ್ಲಿ ಖ್ಯಾತಿಯ ಆದಿತ್ಯನಂತಹ ರಫ್ ಅಂಡ್ ಟಫ್ ಹೀರೋಗಳಿಗೂ ಬರವಿಲ್ಲ. ಆದರೆ ಸಿಕ್ಸ್ ಪ್ಯಾಕ್ ಹೀರೋಗಳು ಯಾರಾದರು ಇದ್ದಾರೆಯೇ ಎಂದು ಹುಡುಕಿದರೆ ಮಾಲಾಶ್ರೀ ಬಿಟ್ಟರೆ ಇನ್ಯಾರು ಕಾಣಸಿಗುವುದಿಲ್ಲ!
ಈ ಹಿಂದೊಮ್ಮೆ ದುನಿಯಾ ವಿಜಯ್ ಸಿಕ್ಸ್ ಪ್ಯಾಕ್‌ನಲ್ಲಿ ಮಿರಮಿರ ಮಿಂಚಿದ್ದರು. ಈಗ ಅವರು ತ್ರಿ ಪ್ಯಾಕ್‌ಗೆ ಇಳಿದಿದ್ದಾರೆ. ಇಷ್ಟು ದಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಫ್ಟ್ ರೋಲ್‌ಗಳಲ್ಲೇ ಕಾಣುತ್ತಿದ್ದರು. ಈಗ ಅವರು ಸಿಕ್ಸ್ ಪ್ಯಾಕ್‌ಗೆ ತಮ್ಮ ದೇಹವನ್ನು ಅರ್ಪಿಸಿದ್ದಾರೆ.
ಇದೆಲ್ಲಾ ಅಣ್ಣಾಬಾಂಡ್ ಚಿತ್ರಕ್ಕಾಗಿ ಎಂಬುದು ನಿಮ್ಮ ಗಮನಕ್ಕಿರಲಿ. ದುನಿಯಾ ಸೂರಿ ನಿರ್ದೇಶಿಸುತ್ತಿರುವ ಪುನೀತ್ ಅವರ ಮಹತ್ವಾಕಾಂಕ್ಷಿ ಚಿತ್ರವಿದು. ಆಕ್ಷನ್ ಪ್ರಧಾನ ಚಿತ್ರವಾದ ಅಣ್ಣಾಬಾಂಡ್‌ನಲ್ಲಿ ಪುನೀತ್ ಅವರು ಸಿಕ್ಸ್ ಪ್ಯಾಕ್ ದೇಹವನ್ನು ಪ್ರದರ್ಶಿಸಲಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸೂರಿ ತಮ್ಮ ಗುರು ಸಮಾನರಾದ ಯೋಗರಾಜ್ ಭಟ್ಟರ ಸೂಚನೆ ಸಲಹೆಗಳ ಮೇರೆಗೆ ಸಂಭಾಷಣೆ ಹೆಣೆಯುತ್ತಿದ್ದಾರೆ. ಚಿತ್ರದಲ್ಲಿ ಪ್ರಿಯಾಮಣಿ ಹಾಗೂ ನಿಧಿ ಸುಬ್ಬಯ್ಯ ಇಬ್ಬರು ನಾಯಕಿಯರು. ರಂಗಾಯಣ ರಘು, ಅಂಕಲ್ ಲೋಕನಾಥ್ ಹಾಗೂ ಅನಿನಾಶ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿ ಹರಿಕೃಷ್ಣ ಸಂಗೀತ ಸತ್ಯ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











