ರಾಗಿಣಿ ಖಾಕಿ ಹಾಕಿದರೆ ಪ್ರೇಕ್ಷಕರಾಗುವರೇ ಕಂಗಾಲು!

'ಖದರ್ ಪೊಲೀಸ್' ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದರೂ ಎಲ್ಲೂ ರಾಗಿಣಿ ರೊಮ್ಯಾನ್ಸ್ ಮಾಡೋದಿಲ್ಲ, ಡ್ಯುಯೆಟ್ ಹಾಡುಗಳಲ್ಲಿ ಕುಣಿಯುವುದಿಲ್ಲ. ಬದಲಿಗೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಜನನಾಯಕಿ ಎಂಬಂತೆ ಬಿಂಬಿತವಾಗುತ್ತಾರೆ. ಅವರನ್ನೇ ಕೇಂದ್ರೀಕೃತವಾಗಿಸಿಕೊಂಡು ಈ ಹಾಡುಗಳನ್ನೂ ಚಿತ್ರೀಕರಿಸಲಾಗುತ್ತದೆ" ಎಂದಿದ್ದಾರೆ ನಿರ್ದೇಶಕ ಆನಂದ್.
ರಾಗಿಣಿ ಪ್ರಧಾನ ಪಾತ್ರದ ಈ ಚಿತ್ರದಲ್ಲಿ ರಂಗಾಯಣ ರಘು, ರವಿಕಾಳೆ, ಅವಿನಾಶ್, ಆದಿ ಲೋಕೇಶ್, ತಾರಾ, ಪೆಟ್ರೋಲ್ ಪ್ರಸನ್ನ ಮುಂತಾದವರೂ ಅಭಿನಯಿಸುತ್ತಿರುವ ಈ ಚಿತ್ರ ಮುಂದಿನ ತಿಂಗಳು ಏಪ್ರಿಲ್ 9ರಂದು ಸೆಟ್ಟೇರಲಿದೆ. ಈ ಮಧ್ಯೆ ರಾಗಿಣಿ ದಿನೇಶ್ ಗಾಂಧಿಯ 'ಛತ್ರಪತಿ' ಚಿತ್ರವನ್ನು ನಿರಾಕರಿಸಿರು ಸುದ್ದಿ ಬಂದಿದೆ. ನಿಜ ಜೀವನದಲ್ಲೂ ರಾಗಿಣಿ ಖದರ್ ತೋರಿಸುತ್ತಿದ್ದಾರೆಯೇ? ಗೊತ್ತಿಲ್ಲ, ಸದ್ಯಕ್ಕಂತೂ ರಾಗಿಣಿ ರಾಜ್ಯಭಾರ ಬಲು ಜೋರಾಗಿಯೇ ಇದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Actress Ragini Dwivedi acts in police role in the movie Khadar Police. Director Anand P Raju directs this movie in Kobri Manju Production.


Click it and Unblock the Notifications











