ರಮೇಶ್, ಅನು ಪ್ರಭಾಕರ್ ಜೋಡಿಗೆ ಮತ್ತೆ ಸ್ವಾಗತ

ಕನ್ನಡ ಚಿತ್ರಗಳ ಇತಿಹಾಸವನ್ನು ನೋಡಿದಾಗ ಕೆಲವು ಜನಪ್ರಿಯ ಜೋಡಿಗಳು ಥಟ್ಟನೆ ನೆನಪಾಗುತ್ತವೆ. ಅವರಲ್ಲಿ ಡಾ ರಾಜ್-ಭಾರತಿ, ವಿಷ್ಣುವರ್ಧನ್-ಸುಹಾಸಿನಿ, ಶಂಕರ್ ನಾಗ್-ಗಾಯತ್ರಿ, ಅನಂತ್ ನಾಗ್-ಲಕ್ಷ್ಮೀ, ಅಂಬರೀಷ್-ಅಂಬಿಕಾ ಹಾಗೇ ರಮೇಶ್ ಅರವಿಂದ್-ಅನು ಪ್ರಭಾಕರ್. ಇದೀಗ ರಮೇಶ್ ಹಾಗೂ ಅನುಪ್ರಭಾಕರ್ ಜೋಡಿ ಮತ್ತೊಮ್ಮೆ ತೆರಯ ಮೇಲೆ ಪ್ರೇಕ್ಷಕರೆದುರು ಪ್ರತ್ಯಕ್ಷವಾಗಲಿದ್ದಾರೆ.

ಇದೀಗ ಅವರಿಬ್ಬರೂ ಜೊತೆಯಾಗಿ ನಟಿಸಲಿರುವ ಚಿತ್ರ ತಂತುರು. ಮುಸ್ಸಂಜೆ ಮಹೇಶ್ ನಿರ್ದೇಶನದ ಈ ಚಿತ್ರದಲ್ಲಿ ರಿಷಿಕಾ ಸಿಂಗ್ ರಮೇಶ್ ಅವರ ತಂಗಿಯಾಗಿ ನಟಿಸಲಿದ್ದಾರೆ. ರಿಷಿಕಾ ಜೋಡಿಯಾಗಿ ಅನಿಲ್ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಬೆಂಗಳೂರು ಹಾಗೂ ರಾಜ್ಯದ ಹಲವುಕಡೆ ತುಂತುರು ಚಿತ್ರಕ್ಕೆ ಭರದಿಂದ ಚಿತ್ರೀಕರಣ ಸಾಗುತ್ತಿದೆ.

ಈ ಜನಪ್ರಿಯ ಜೋಡಿ ರಮೇಶ್ ಹಾಗೂ ಅನು ಪ್ರಭಾಕರ್ ಜೋಡಿ, ಈ ಮೊದಲು ಶ್ರೀರಸ್ತು ಶುಭಮಸ್ತು, ಶಾಪ ಹಾಗೂ ಬಿಸಿಬಿಸಿ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಇಬ್ಬರೂ ಪಾತ್ರಗಳಲ್ಲಿ ತಲ್ಲೀನರಾಗಿ ನಟಿಸಿ ಪ್ರೇಕ್ಷಕರ ಪ್ರಶಂಸೆ ಗಿಟ್ಟಿಸಿದ್ದರು. ಇಬ್ಬರಿಗೂ ರಾಜ್ಯ ಪ್ರಶಸ್ತಿ ಕೂಡ ದೊರೆತಿದೆ. ಇದೀಗ ಮತ್ತೆ ಈ ಜೋಡಿಯನ್ನು ನೋಡುವ ಭಾಗ್ಯ ತುಂತುರು ಮೂಲಕ ಮತ್ತೊಮ್ಮೆ ಪ್ರೇಕ್ಷಕರಿಗೆ ಲಭಿಸಲಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
One of the most popular pairs in Kannada screen is Ramesh Aravind and Anu Prabhakar. They have acted in films like Srirasthu Shubamasthu, Shaapa, Bisi Bisi. Now, they are again teamed in the movie ‘Tunturu’ of director Mussanje Mahesh. Both are known for wonderful performance and won state awards in the past.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X