ಕೃಷ್ಣ ನೀ ಲೇಟಾಗಿ ಬಾರೋ ಶೀಘ್ರದಲ್ಲೇ ತೆರೆಗೆ!
ಎಂ.ಡಿ ಪ್ರಕಾಶ್ ನಿರ್ಮಿಸುತ್ತಿರುವ 'ಕೃಷ್ಣ ನೀ ಲೇಟಾಗಿ ಬಾರೊ' ಚಿತ್ರಕ್ಕೆ ಇದೇ ಮೊದಲ ಬಾರಿಗೆ ಆಕ್ಷನ್, ಕಟ್ ಹೇಳುತ್ತಿದ್ದಾರೆ ನಿರ್ದೇಶಕ ಮೋಹನ್. ರಮೇಶ್ ಅರವಿಂದ್, ನಿಧಿ ಸುಬ್ಬಯ್ಯ, ಮೋಹನ್ ಮತ್ತು ನೀತೂ ಚಿತ್ರದ ಮುಖ್ಯ ಪಾತ್ರಧಾರಿಗಳು. ಪ್ರವೀಣ್ ಗೋಡ್ಕಿಂಡಿ ಸಂಗೀತ ಚಿತ್ರಕ್ಕಿದೆ.
ಮಡಿಕೇರಿಯಲ್ಲಿ ಮೊದಲ ಹಂತದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಚಿತ್ರದ ಮಾತಿನ ಭಾಗ ಹಾಗೂ 3 ಹಾಡುಗಳ ಚಿತ್ರೀಕರಣ ಸಂಪೂರ್ಣಗೊಂಡಿದ್ದು, 2 ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಮೋಹನ್ ಮತ್ತು ನೀತೂ ಹೆಜ್ಜೆ ಹಾಕಿರುವ ಹಾಡನ್ನು ಕೇರಳಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ಈ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಈ ಚಿತ್ರದಲ್ಲಿ ಹುಡುಗಿಯರ ಕಾಲೇಜಿನ ಏಕೈಕ ಪುರುಷ ಉಪನ್ಯಾಸಕನಾಗಿ ರಮೇಶ್ ಹಾಗೂ ಫ್ಯಾಷನ್ ಫೋಟೋಗ್ರಾಫರ್ ಆಗಿ ಮೋಹನ್ ಕಾಣಿಸಲಿದ್ದಾರೆ. ಎಂ.ಡಿ. ಪ್ರಕಾಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರವೀಣ್ ಗೋಡ್ಕಿಂಡಿ ಅವರ ಸಂಗೀತ ಸಂಯೋಜನೆ, ಆರ್.ವಿ. ನಾಗೇಶ್ವರರಾವ್ ಅವರ ಛಾಯಾಗ್ರಹಣ, ಚಿನ್ನಿಪ್ರಕಾಶ್, ಲಾಲಿಪಪ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











