ಕೆಂಪೇಗೌಡನಿಗೆ ಕೈಕೊಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್

By Rajendra

ಸುದೀಪ್ ಅಭಿನಯದ 'ಕೆಂಪೇಗೌಡ' ಚಿತ್ರದ ಹಾಡೊಂದನ್ನು ಕ್ರೇಜಿಸ್ಟಾರ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಸುಳ್ಳಾಗಿದೆ. ಕಾರಣ ರವಿಚಂದ್ರನ್ ಬಿಜಿಯೋ ಬಿಜಿಯಂತೆ. ಹಾಗಾಗಿ 'ಕೆಂಪೇಗೌಡ' ಹಾಡಿಗೆ ಕ್ರೇಜಿಸ್ಟಾರ್ ಕೈಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅವರೇ ಚಿತ್ರದ ಎಲ್ಲ ಹಾಡುಗಳನ್ನು ನಿರ್ದೇಶಿಸಿದ್ದಾರೆ.

ಸದ್ಯಕ್ಕೆ 'ಮಲ್ಲಿಕಾರ್ಜುನ' ಚಿತ್ರದಲ್ಲಿ ಕ್ರೇಜಿಸ್ಟಾರ್ ಬಿಜಿಯಾಗಿದ್ದಾರೆ. ಈ ಚಿತ್ರದಲ್ಲಿ ಅವರದು ದ್ವಿಪಾತ್ರಾಭಿನಯ. ದಿನೇಶ್ ಗಾಂಧಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಮುರಳಿ ಮೋಹನ್ ನಿರ್ದೇಶಿಸುತ್ತಿದ್ದಾರೆ. 'ಮಲ್ಲಿಕಾರ್ಜುನ' ಚಿತ್ರದ ಹಾಡುಗಳ ವಿದೇಶಿ ಚಿತ್ರೀಕರಣಕ್ಕಾಗಿ ಕ್ರೇಜಿ ಸ್ಟಾರ್ ಈಗಾಗಲೆ ವಿಮಾನ ಹತ್ತಿಯಾಗಿದೆ ಎನ್ನುತ್ತವೆ ಮೂಲಗಳು.

ಏತನ್ಮಧ್ಯೆ 'ಕೆಂಪೇಗೌಡ' ನಿರ್ಮಾಪಕ ಶಂಕರೇಗೌಡ ಮತ್ತು ನಿರ್ದೇಶಕ ಸುದೀಪ್ ಚಿತ್ರವನ್ನು ಫೆಬ್ರವರಿ 18ರಂದು ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ. 'ಕೆಂಪೇಗೌಡ' ಚಿತ್ರದ ಬಾಕಿ ಇರುವ ಒಂದೇ ಒಂದು ಹಾಡನ್ನು ಒಳಾಂಗಣದಲ್ಲಿ ಚಿತ್ರೀಕರಿಸಲು ಸಿದ್ಧತೆ ನಡೆದಿದೆ.

ವಿಶ್ವಕಪ್ ಕ್ರಿಕೆಟ್ ಶುರುವಾಗುವುದಕ್ಕೂ ಮುನ್ನ ಚಿತ್ರವನ್ನು ತೆರೆಗೆ ತರಬೇಕು ಎಂಬ ಧಾವಂತದಲ್ಲಿ ನಿರ್ಮಾಪಕರು ಇದ್ದಾರೆ. 'ಕೆಂಪೇಗೌಡ' ಚಿತ್ರದ ಹಾಡೊಂದನ್ನು ನಿರ್ದೇಶಿಸುವಂತೆ ಕ್ರೇಜಿ ಸ್ಟಾರ್ ಬಳಿ ಸುದೀಪ್ ವಿನಂತಿಸಿಕೊಂಡಿದ್ದರು. ಕಡೆ ಗಳಿಗೆಯಲ್ಲಿ ಕ್ರೇಜಿ ಸ್ಟಾರ್ ಕೈಕೊಟ್ಟಿರುವುದು ಸುದೀಪ್‌ಗೆ ಒಂಚೂರು ಬೇಸರವೂ ಆಗಿದೆಯಂತೆ.

More from Filmibeat

English summary
Crazy Star Ravichandran not directing a song sequence in Sudeep starer Kempe Gowda. This is because Ravichandran has been busy with the song sequences for his film Mallikarjuna. Previously Sudeep posted the same on his Facebook and Twitter page.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X