»   »  ಈ ವರ್ಷದ 50ನೇ ಚಿತ್ರ ಎಂಬ ಅಗ್ಗಳಿಕೆ ಮಚ್ಚ ಪಾತ್ರ!

ಈ ವರ್ಷದ 50ನೇ ಚಿತ್ರ ಎಂಬ ಅಗ್ಗಳಿಕೆ ಮಚ್ಚ ಪಾತ್ರ!

Subscribe to Filmibeat Kannada
Machcha movie still
ಕೇವಲ ನಾಲ್ಕು ತಿಂಗಳಲ್ಲಿ 50 ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಕನ್ನಡ ಚಿತ್ರೋದ್ಯಮದಲ್ಲಿ ಇದೊಂದು ಹೊಸ ದಾಖಲೆ ಎನ್ನಬಹುದು.ಈ ವರ್ಷ ಬಿಡುಗಡೆಯಾಗಿರುವ 50ನೇ ಕನ್ನಡ ಚಿತ್ರ ಎಂಬ ಅಗ್ಗಳಿಕೆಗೆ 'ಮಚ್ಚ' ಪಾತ್ರವಾಗಿದೆ. ಕಳೆದ ವರ್ಷ 118 ಕನ್ನಡ ಚಿತ್ರಗಳು ಬಿಡುಗಡೆಯಾಗಿ ದಾಖಲೆ ಸೃಷ್ಟಿಸಿದ್ದವು. ಆ ದಾಖಲೆಯನ್ನು ಅಳಿಸುವ ಭರವಸೆಯನ್ನು 2009ನೇ ವರ್ಷ ಮೂಡಿಸುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷಬಿಡುಗಡೆಯಾಗಲಿರುವ ಚಿತ್ರಗಳ ಸಂಖ್ಯೆ ಮತ್ತಷ್ಟು ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ. ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆಯೇನೋ ದೊಡ್ಡದಾಗಿದೆ. ಆದರೆ ಗುಣಮಟ್ಟದ ವಿಚಾರಕ್ಕೆ ಬಂದರೆ ಹೇಳಿಕೊಳ್ಳುವಂತಿಲ್ಲ.

ವಿಚಿತ್ರವೆಂದರೆ ದೊಡ್ಡ ಸ್ಟಾರ್ ಚಿತ್ರಗಳಿಗೆ ಹೋಲಿಸಿದರೆ ಹೊಸಬರ ಚಿತ್ರಗಳೇ ಹೆಚ್ಚಾಗಿ ಬಿಡುಗಡೆಯಾಗುತ್ತಿವೆ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಮುಗಿಯುವವರೆಗೂ ದೊಡ್ಡ ಸ್ಟಾರ್ ಗಳ ಚಿತ್ರಗಳು ಬಿಡುಗಡೆಯಾಗಲು ಅಂಜುತ್ತಿವೆ. ಇದೇ ಒಳ್ಳೇ ಅವಕಾಶ ಎಂದು ತಿಳಿದ ಹೊಸಬರ ಚಿತ್ರಗಳು ಚಿತ್ರಮಂದಿರಗಳಿಗೆ ದಾಂಗುಡಿ ಇಡುತ್ತಿವೆ. ಆದರೆ ಬಂದಷ್ಟೇ ವೇಗವಾಗಿ ಚಿತ್ರಮಂದಿರಗಳಿಂದ ಕಾಣೆಯಾಗುತ್ತಿರುವುದು ದುರಂತ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮಚ್ಚ ರಾಜ್ಯಾದ್ಯಂತ ಈ ವಾರ ತೆರೆಗೆ
ಎರಡನೇ ಮದುವೆಗೆ ಸಜ್ಜಾದ ನಟಿ ಶ್ರುತಿ
ಸೆನ್ಸಾರ್ ಮಂಡಳಿಗೆ ಚಳ್ಳೆಹಣ್ಣು ತಿನ್ನಿಸಿದ ಹೊಡಿಮಗ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada