ಪುಂಡ ಅಭಿಮಾನಿಗೆ ಸಮಂತಾ ಬಿಸಿಬಿಸಿ ಕಜ್ಜಾಯ
ತೆಲುಗು,ತಮಿಳು ಚಿತ್ರರಂಗದ ಉದಯೋನ್ಮುಖ ತಾರೆ ಸಮಂತಾ ಪುಂಡ ಅಭಿಮಾನಿಗೆ ಬಿಸಿಬಿಸಿ ಕಜ್ಜಾಯ ಕೊಟ್ಟ ಘಟನೆ ತಿರುಪತಿಯಲ್ಲಿ ನಡೆದಿದೆ. ಮಳಿಗೆಯೊಂದರ ಉದ್ಘಾಟನೆಗಾಗಿ ಆಕೆ ತಿರುಪತಿಗೆ ಬಂದಿದ್ದರು. ಈ ವಿಷಯ ತಿಳಿದ ಅಭಿಮಾನಿಗಳು ಆ ಮಳಿಗೆ ಬಳಿಗೆ ದೌಡಾಯಿಸಿದ್ದರು.
ಸಮಂತಾರನ್ನು ನೋಡಲು ಬಂದ ಸಾವಿರಾರು ಅಭಿಮಾನಿಗಳಲ್ಲಿ ಪುಂಡ ಅಭಿಮಾನಿಗಳು ಇದ್ದರು. ಒಂದಿಬ್ಬರು ಸಮಂತಾರ 'ಖಾಸಗಿ' ಭಾಗಗಳನ್ನು ಮುಟ್ಟಲು ಹಾತೊರೆದರು. ಇದರಿಂದ ರೊಚ್ಚಿಗೆದ್ದ ನಾಯಕಿ ಪುಂಡ ಅಭಿಮಾನಿಗಳಿಗೆ ಒದ್ದು ಬುದ್ಧಿ ಕಲಿಸಿದ್ದಾರೆ.
ಮೂರು ಮಂದಿ ಪುಂಡ ಅಭಿಮಾನಿಗಳನ್ನು ಸಮಂತಾ ಹಿಗ್ಗಾ ಮುಗ್ಗಾ ಥಳಿಸಿದ್ದಾಗಿ ತಿರುಪತಿಯಿಂದ ಬಂದಇ ಮೇಲ್ ತಿಳಿಸಿದೆ. ಈ ಹಿಂದೆ ಸಿನಿಮಾ ತಾರೆಗಳಾದ ಶ್ರೀಯಾ, ಭೂಮಿಕಾ ಮತ್ತ್ತು ಜೆನಿಲಿಯಾ ಅವರೊಂದಿಗೂ ಪುಂಡ ಅಭಿಮಾನಿಗಳು ಅಸಭ್ಯವಾಗಿ ನಡೆದುಕೊಂಡು ಬಾಸುಂಡೆ, ಬಿಸಿಬಿಸಿ ಕಜ್ಜಾಯಗಳನ್ನು ತಿಂದಿದ್ದರು. [ಜೆನಿಲಿಯಾ]
More from Filmibeat
English summary
Telugu and Tamil actress Samantha slapped a fan of hers at Tirupathi. Samantha went to Tirupathi for a shop opening, there some of her fans misbehaved with her touching her private parts. Reacting to the fans misbehavior she slapped them.


Click it and Unblock the Notifications











