ಸುದೀಪ್ ವಿಷ್ಣುವರ್ಧನ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್
ಗುರುವಾರ (ಡಿ.8) ರಾಜ್ಯದಾದ್ಯಂತ ಅಮೋಘ ಪ್ರಾರಂಭವಾಗಿರುವ ಸುದೀಪ್ ಅಭಿನಯದ 'ವಿಷ್ಣುವರ್ಧನ' ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ್ಯಂತೆ 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಮೇಕಿಂಗ್ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬಂದಿವೆ.
ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಬೆಳಗ್ಗೆ 9 ಗಂಟೆಗೆ ವಿಷ್ಣು ಸುದೀಪ್ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಸಿಡಿಮದ್ದು ಸಿಡಿಸಿ ಅವರ ಅಭಿಮಾನಿಗಳು ಸಂಭ್ರಮಿಸಿದರು. ಡಾ.ವಿಷ್ಣು ಸುದೀಪ್ ಸೇನಾ ಸಮಿತಿ ಕೂಡ 'ವಿಷ್ಣುವರ್ಧನ' ಚಿತ್ರದ ಯಶಸ್ವಿಗೆ ವಿಶೇಷ ಪೂಜೆ ಸಲ್ಲಿಸಿತು.
ಚಿತ್ರ ಬಿಡುಗಡೆಗೂ ಮುನ್ನ ದಿ.ವಿಷ್ಣುವರ್ಧನ ಅವರಿಗೆ ಅವಹೇಳನ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಆ ರೀತಿಯ ಯಾವುದೇ ಸನ್ನಿವೇಶಗಳು ಚಿತ್ರದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಒನ್‌ಇಂಡಿಯಾ ಕನ್ನಡ ಬಾತ್ಮಿದಾರರು. 'ವಿಷ್ಣುವರ್ಧನ' ಚಿತ್ರ ವಿಮರ್ಶೆಯನ್ನು ನಿರೀಕ್ಷಿಸಿ. ಸದ್ಯಕ್ಕೆ ಟ್ರೈಲರ್ ನೋಡಿ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Actor Sudeep, Priyamani, Bhavana, Sonu Sood, Dwarakish, Arunkumar, Achyuthkumar lead Kannada movie Vishnuvardhana gets good response from audience. The movie released around 120 theatres all over Karnataka. Watch Oneindia Kannada for Vishnuvardhana movie review.


Click it and Unblock the Notifications











