ಯೂಟ್ಯೂಬ್ ಬಾಕ್ಸ್ ಆಫೀಸ್ ನಮ್ಮನೆ ಥೇಟರ್

ಭಾರತದ ಸಿನಿಮಾಗಳಿಗಾಗಿ ರೂಪಿಸಲಾಗಿರುವ ಯೂಟ್ಯೂಬ್ ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬಾಸ್ಟರ್ ಮೂವಿಗಳ ಪ್ರೀಮಿಯರ್ ಪ್ರದರ್ಶನ ಕೂಡಾ ಪ್ರತಿ ತಿಂಗಳು ನಡೆಯಲಿದೆ. ಜಾಹೀರಾತುಗಳ ಹಾವಳಿಯಲ್ಲಿ ಸ್ವಲ್ಪ ದಿನಗಳ ಮಟ್ಟಿಗೆ ಸಹಿಸಿ ಕೊಂಡರೆ ಥೇಟರ್ ಗುಣಮಟ್ಟದ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಸುಮಾರು 1500 ಭಾರತೀಯ ಸಿನಿಮಾಗಳನ್ನು ಕಲೆ ಹಾಕಿರುವ ಬಾಕ್ಸ್ ಆಫೀಸ್, ಹಿಂದಿ ನಂತರ ಪ್ರಾದೇಶಿಕ ಭಾಷೆಗಳಲ್ಲೂ ಈ ಸೌಲಭ್ಯವನ್ನು ನೀಡಲು ಯೋಜಿಸಿದೆ.
ಯಶ್ ರಾಜ್ ಬ್ಯಾನರ್ ನ 'ಬ್ಯಾಂಡ್ ಬಾಜಾ ಬಾರಾತ್' ಚಿತ್ರದ ಪ್ರೀಮಿಯರ್ ಶೋ ಮೂಲಕ ಯೂಟ್ಯೂಬ್ ನ ಬಾಕ್ಸ್ ಆಫೀಸ್ ಗೆ ಚಾಲನೆ ನೀಡಲಾಗಿದೆ. 1080p HD ರೆಸೆಲ್ಯೂಷನ್ ಗುಣಮಟ್ಟದವರೆಗೂ ಚಿತ್ರ ಲಭ್ಯವಾಗಲಿದೆ. ಚಿತ್ರ ಸಂಬಂಧಿಸಿದ ಕುತೂಹಲ ಮಾಹಿತಿ, ರಸಪ್ರಶ್ನೆ, ಸ್ಪರ್ಧೆಗಳು ಕೂಡಾ ಇದರಲ್ಲಿವೆ.
ಯೂಟ್ಯೂಬ್ ನಲ್ಲಿ ಪ್ರತಿ ನಿಮಿಷ 48 ಗಂಟೆಗಳ ಕಾಲಾವಾಧಿಯ ವಿಡಿಯೋ ಅಪ್ ಲೋಡ್ ಆಗುತ್ತಿದೆ. ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಚಿತ್ರ ವೀಕ್ಷಣ ಸೌಲಭ್ಯ ಒದಗಿಸುವುದು ನಮ್ಮ ಉದ್ದೇಶ ಎಂದು ಯೂಟ್ಯೂಬ್ ನ ಅಧಿಕಾರಿ ಗೌತಮ್ ಆನಂದ್ ಹೇಳುತ್ತಾರೆ. ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸೌಲಭ್ಯ ಎಲ್ಲೆಡೆ ಹೆಚ್ಚಿದ್ದಂತೆ ಆನ್ ಲೈನ್ ವಿಡಿಯೋ, ಸಿನಿಮಾ ವೀಕ್ಷಣೆ ಅಧಿಕವಾಗುತ್ತಿದೆ. ಯೂಟ್ಯೂಬ್ ಹೋಂ ಥೇಟರ್ ಜನಪ್ರಿಯಗೊಳ್ಳುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications











