»   » ಜೀ ಕನ್ನಡದಲ್ಲಿ ಗೇಮ್ ಶೋ'ಡ್ಯಾಡಿ ನಂ 1'

ಜೀ ಕನ್ನಡದಲ್ಲಿ ಗೇಮ್ ಶೋ'ಡ್ಯಾಡಿ ನಂ 1'

Posted By:
Subscribe to Filmibeat Kannada
Zee kannada game show daddy no.1
ಭಾರತದ ಕಿರುತೆರೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ತಂದೆ ಮಕ್ಕಳ ನಡುವಿನ ಬಾಂಧವ್ಯ ಗುರುತಿಸುವಂತಹ ಅದ್ಭುತ ರಿಯಾಲಿಟಿ ಗೇಮ್ ಶೋ 'ಟಾಟಾ ಇಂಡಿಕಾಂ ಡ್ಯಾಡಿ ನಂ1ಜೀ ಕನ್ನಡದಲ್ಲಿ ನವೆಂಬರ್ 10 ರಿಂದ ಪ್ರತಿ ಸೋಮವಾರದಿಂದ ಗುರುವಾರದವರೆಗೆ ರಾತ್ರಿ 09 ಗಂಟೆಗೆ ಪ್ರಸಾರವಾಗಲಿದೆ.

ತಂದೆ ಮಕ್ಕಳ ನಡುವಿನ ಬಾಂಧವ್ಯ, ನವಿರು ಸಂಬಂಧವನ್ನು ಬಿಂಬಿಸುವುದರ ಜೊತೆಗೆ ಈ ಗೇಮ್ ಶೋ ಮನರಂಜನೆ, ಸಾಹಸ, ಬುದ್ಧಿವಂತಿಕೆಯನ್ನು ಪರೀಕ್ಷಿಸುವಂತಿರುವ ಈ ಕಾರ್ಯಕ್ರಮ ಕರ್ನಾಟಕದ ಕಿರುತೆರೆಯ ಬಹು ನಿರೀಕ್ಷಿತ ಕಾರ್ಯಕ್ರಮವಾಗಿದೆ. 07 ರಿಂದ 12 ವರ್ಷ ವಯಸ್ಸಿನ ಮಕ್ಕಳು ತಮ್ಮ ತಂದೆಯ ಜೊತೆಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಈಗಾಗಲೇ ಆಯ್ಕೆ ಪ್ರಕ್ರಿಯೆಯ ಮೂಲಕ 112 ಟೀಮ್‌ಗಳನ್ನು ಆಯ್ಕೆ ಮಾಡಲಾಗಿದೆ.

ಪ್ರಿಲಿಮಿನರಿ ರೌಂಡ್ಸ್‌ನ ಪ್ರಾರಂಭದ ಪ್ರತಿ ಸಂಚಿಕೆಗಳಲ್ಲಿ 4 ಟೀಮ್‌ಗಳು ಭಾಗವಹಿಸುತ್ತವೆ. ಅವುಗಳಲ್ಲಿ ಒಂದು ಟೀಮ್ ಕ್ವಾರ್ಟರ್ ಫೈನಲ್ಸ್‌ಗೆ ಆಯ್ಕೆಯಾಗುತ್ತದೆ. ಅಲ್ಲಿ ಆಯ್ಕೆಯಾಗುವ ಟೀಮ್‌ಗಳ ನಡುವೆ ಸೆಮಿಫೈನಲ್ ಸ್ಫರ್ಧೆ ನಡೆಯುತ್ತದೆ. ಫೈನಲ್‌ಗೆ ಆಯ್ಕೆಯಾಗುವ ೪ ಟೀಮ್‌ಗಳಲ್ಲಿ ಒಂದು ಟೀಮ್ ಅನ್ನು ವಿಜೇತರಾಗಿ ಆಯ್ಕೆ ಮಾಡಲಾಗುತ್ತದೆ.

ಮಕ್ಕಳ ಮನಸ್ಸಿನಲ್ಲಿ ಅವರ 'ತಂದೆ' ಒಬ್ಬ 'ಸೂಪರ್ ಹೀರೋ' ಆಗಿರುತ್ತಾನೆ. ಅವರ ಈ ದೃಷ್ಟಿಕೋನವನ್ನು ಗಮನದಲ್ಲಿರಿಸಿಕೊಂಡು ಈ ಗೇಮ್ ಶೋ ನಿರ್ಮಿಸಲಾಗಿದೆ. ತಂದೆಯ ನಾಯಕತ್ವ ಗುಣ, ಅವನ ರಕ್ಷಣಾ ಮನೋಭಾವ, ಧೈರ್ಯವನ್ನು ಪರೀಕ್ಷೆಗೊಡ್ಡುವ ಹಾಗೂ ಆ ಕುರಿತು ಮಕ್ಕಳಲ್ಲಿ ಹೆಮ್ಮೆಯುಂಟು ಮಾಡುವಂತಹ ವಿವಿಧ ಆಟಗಳನ್ನು ಇಬ್ಬರ ಜೊತೆಗೂಡಿ ಆಡಿಸಲಾಗುತ್ತದೆ. ಇದರಲ್ಲಿ ವಿಜೇತವಾಗುವವರಿಗೆ ಕರ್ನಾಟಕದ 'ನಂ 1ಡ್ಯಾಡಿ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ವಿಶಿಷ್ಟ ಗೇಮ್ ಶೋ ನಿರೂಪಣೆಯನ್ನು ಜನಪ್ರಿಯ ಕಿರುತೆರೆ ನಟ ರಾಜೇಶ್ ನಡೆಸಿಕೊಡಲಿದ್ದಾರೆ.

ಸಾಮಾನ್ಯವಾಗಿ ಕುಟುಂಬದ ವಿಷಯಕ್ಕೆ ಬಂದರೆ ತಾಯಿಯನ್ನು ಹೆಚ್ಚಾಗಿ ಎಲ್ಲ ವಿಷಯಗಳಲ್ಲಿ ಗುರುತಿಸಲಾಗುತ್ತದೆ. ಇದಕ್ಕೆ ತಕ್ಕಂತೆ ಕಿರುತೆರೆಯಲ್ಲೂ ಕೂಡಾ ತಾಯಿ ಮಕ್ಕಳ ಸಂಬಂಧಕ್ಕೆ ಕುರಿತಂತೆ ಹಲವು ಕಾರ್ಯಕ್ರಮಗಳು ಈಗಾಗಲೇ ಬಂದಿವೆ. ಆದರೆ ಜೀ ಕನ್ನಡದಲ್ಲಿ ಪ್ರಸಾರವಾಗುವ 'ಡ್ಯಾಡಿ ನಂ 1' ತಂದೆಯ ಬಗ್ಗೆ ಮಕ್ಕಳಲ್ಲಿ ಇರುವ ಬಾಂಧವ್ಯವನ್ನು ಒರೆಗೆ ಹಚ್ಚಲಿದೆ. ಪ್ರತಿಯೊಬ್ಬ ಪುಟಾಣಿಗೂ ತನ್ನ ತಂದೆ 'ರೋಲ್ ಮಾಡೆಲ್' ಆಗಿರುತ್ತಾನೆ. ಅವನ ಜೊತೆಗಿನ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮನರಂಜನೆ, ಸಾಹಸ ಪ್ರಧಾನ ಆಟಗಳನ್ನು ಬಳಸಿಕೊಂಡಿದೆ' ಎಂದು ಜೀ ಕನ್ನಡದ ನಾನ್‌ಫಿಕ್ಷನ್ ಮುಖ್ಯಸ್ಥೆ ವೈಷ್ಣವಿ ಹೇಳಿದರು.

ಜೀಕನ್ನಡ ಯಾವತ್ತೂ ತನ್ನ ಹೊಸತನದ ಕಾರ್ಯಕ್ರಮಗಳನ್ನು ನೀಡುತ್ತಿದೆ. ಡ್ಯಾಡಿ ನಂ 1 ಹಲವು ರೀತಿಯಲ್ಲಿ ಪ್ರಥಮವಾಗಿದೆ. ಈ ರೀತಿಯ ರಿಯಾಲಿಟಿ ಶೋ ಈವರೆಗೆ ಭಾರತದ ಕಿರುತೆರೆಯಲ್ಲಿ ಪ್ರಸಾರವಾಗಿಲ್ಲ. ಈ ಕಾರ್ಯಕ್ರಮದ ಚಿತ್ರಿಕರಣಕ್ಕಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಅದ್ಭುತ ಸೆಟ್ ನಿರ್ಮಿಸಲಾಗಿದೆ. ಕನ್ನಡ ಕಿರುತೆರೆಯಲ್ಲಿ ಈವರೆಗಿನ ಎಲ್ಲ ಗೇಮ್ ಶೋಗಳಿಗಿಂತ ವಿಭಿನ್ನವಾಗಿ ಈ ಕಾರ್ಯಕ್ರಮವನ್ನು ಚಿತ್ರಿಕರಿಸಲಾಗಿದೆ. ಭಾರತೀಯ ಕಿರುತೆರೆ ಇತಿಹಾಸದಲ್ಲಿ ಇದು ಹೊಸ ರೀತಿಯ ರಿಯಾಲಿಟಿ ಗೇಮ್ ಶೋ ಯುಗಕ್ಕೆ ನಾಂದಿ ಹಾಡಲಿದೆ' ಎಂದು ಜೀ ಕನ್ನಡ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada