»   » ‘ಶೃಂಗಾರ ಕಾವ್ಯ’-‘ನವಿಲೂರು ನೈದಿಲೆ’ ಚಿತ್ರಗಳ ನಟಿ ಸಿಂಧು ನಿಧನ

‘ಶೃಂಗಾರ ಕಾವ್ಯ’-‘ನವಿಲೂರು ನೈದಿಲೆ’ ಚಿತ್ರಗಳ ನಟಿ ಸಿಂಧು ನಿಧನ

Subscribe to Filmibeat Kannada

ಬೆಂಗಳೂರು : ಸುನಾಮಿ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸುವಾಗ ಕುಸಿದುಬಿದ್ದು ಅಸ್ವಸ್ಥರಾಗಿದ್ದ ಚಿತ್ರನಟಿ ಸಿಂಧು ನಿಧನರಾಗಿದ್ದಾರೆ.

ಮೂರು ದಿನಗಳ ಹಿಂದೆ ಸುನಾಮಿ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸುವ ಸಂದರ್ಭದಲ್ಲಿ ಕುಸಿದುಬಿದ್ದಿದ್ದ ಸಿಂಧು ಅವರನ್ನು ಚೆನ್ನೈನ ಆಸ್ಪತ್ರೆಯಾಂದರಲ್ಲಿ ದಾಖಲಿಸಲಾಗಿತ್ತು . ಆದರೆ ಚೇತರಿಸಿಕೊಳ್ಳದ ಸಿಂಧು, ಜನವರಿ 6ರಂದು ನಿಧನರಾದರು. ಪತಿ ಹಾಗೂ ಮಗಳನ್ನು ಅವರು ಅಗಲಿದ್ದಾರೆ.

‘ಶೃಂಗಾರ ಕಾವ್ಯ’ ಚಿತ್ರದಲ್ಲಿ ರಘುವೀರ್‌ಗೆ ಜೋಡಿಯಾಗಿ ನಟಿಸಿದ್ದ ಸಿಂಧು, ರಘುವೀರ್‌ ಅವರನ್ನು ಮದುವೆಯೂ ಆಗಿದ್ದರು. ‘ತುಂಗಭದ್ರ’ ಹಾಗೂ ‘ನವಿಲೂರು ನೈದಿಲೆ’ ಸಿಂಧೂ ಅಭಿನಯದ ಇತರ ಚಿತ್ರಗಳು.

ಸಿಂಧು ಚೆನ್ನೈನಲ್ಲಿ ನೆಲೆಸಿದ್ದರು. ಈಚಿನ ದಿನಗಳಲ್ಲಿ ತಮಿಳು ಕಿರುತೆರೆ ಧಾರಾವಾಹಿಗಳಲ್ಲಿ ಸಿಂಧು ನಟಿಸುತ್ತಿದ್ದರು. ‘ಇನೈಂದ ಕೈಗಳ್‌’ ಸೇರಿದಂತೆ ಅನೇಕ ತಮಿಳು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಅರುಣ್‌ ಪಾಂಡ್ಯನ್‌ ಹಾಗೂ ಪ್ರಭು ಅವರಿಗೆ ನಾಯಕಿಯಾಗಿ ಸಿಂಧು ಅಭಿನಯಿಸಿದ್ದರು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada