»   » ‘ಅಂಬಿ-ಉಪ್ಪಿ’ ಮೆಗಾ ಜೋಡಿ

‘ಅಂಬಿ-ಉಪ್ಪಿ’ ಮೆಗಾ ಜೋಡಿ

Posted By:
Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ಕನ್ನಡ
ಸ್ಯಾಂಡಲ್‌ವುಡ್‌ನ ಬೆಳ್ಳಿತೆರೆಯ ಮೇಲೆ ಮತ್ತೊಂದು ಮೆಗಾ ಕಾಂಬಿನೇಷನ್‌ ಕಾಣೋ ಅವಕಾಶ ಪ್ರೇಕ್ಷಕರ ಪಾಲಿಗೆ ಬಂದಿದೆ. ರೆಬಲ್‌ಸ್ಟಾರ್‌ ಮತ್ತು ರಿಯಲ್‌ಸ್ಟಾರ್‌ಗಳು ಕೈಜೋಡಿಸಿದ್ದಾರೆ.

ಅಂಬಿ ಮತ್ತು ಉಪ್ಪಿಯ ಮಸ್ತುಮಸ್ತು ಜೋಡಿ ಮಾಡೋ ಮ್ಯಾಜಿಕ್‌ ಬಗ್ಗೆ ಗಾಂಧಿನಗರದ ತುಂಬೆಲ್ಲ ಸಾಕಷ್ಟು ಕುತೂಹಲವಿದೆ. ಚಿತ್ರರಂಗದ ಎರಡು ಅಲೆಗಳು ಒಂದೆಡೆ ಸೇರಿರುವುದರಿಂದ ಚಿತ್ರೋದ್ಯಮದಲ್ಲೊಂದು ಉತ್ಸಾಹ ಕಾಣಿಸಿಕೊಂಡಿದೆ.

ತಮಿಳಿನಲ್ಲಿ ಬಂಪರ್‌ಹಿಟ್‌ ಆದ ‘ದೇವರ ಮಗನ್‌’ ಈಗ ಕನ್ನಡದಲ್ಲಿ ‘ತಂದೆಗೆ ತಕ್ಕ ಮಗ’ನಾಗಿ ರೂಪುಗೊಳ್ಳುತ್ತಿದೆ. ತಮಿಳಿನಲ್ಲಿ ಶಿವಾಜಿ ಗಣೇಶನ್‌ ಮಾಡಿದ್ದ ಪಾತ್ರದಲ್ಲಿ ಅಂಬರೀಷ್‌, ಕಮಲಹಾಸನ್‌ ಪಾತ್ರದಲ್ಲಿ ಉಪೇಂದ್ರ ನಟಿಸಲು ಅಣಿಯಾಗಿದ್ದಾರೆ. ಇಷ್ಟು ದಿನ ನಾಪತ್ತೆಯಾಗಿದ್ದ ಎಸ್‌.ಮಹೇಂದರ್‌‘ಆ್ಯಕ್ಷನ್‌-ಕಟ್‌’ ಹೇಳೋದಕ್ಕೆ ನಿಂತಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್‌.ರಮೇಶ್‌ ಅವರ ಪತ್ನಿ ಹೇಮಲತಾ ರಮೇಶ್‌, ಬಹುನಿರೀಕ್ಷೆಯ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬೆಂಗಳೂರು, ಸಕಲೇಶಪುರ, ಮೈಸೂರುಗಳಲ್ಲಿ ಚಿತ್ರೀಕರಣಕ್ಕೆ ಯೋಜನೆ ರೂಪಿಸಲಾಗಿದ್ದು, ಚಿತ್ರದ ಮುಹೂರ್ತದ ಸಮಾರಂಭ ಫೆ.20ರಂದು ನಡೆಯಲಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada