»   » ಏನ್‌ ಸಮಾಚಾರ, ಏನ್‌ ವಿಶೇಷ? : ಸ್ಯಾಂಡಲ್‌ವುಡ್‌ ಚುರುಮುರಿ!

ಏನ್‌ ಸಮಾಚಾರ, ಏನ್‌ ವಿಶೇಷ? : ಸ್ಯಾಂಡಲ್‌ವುಡ್‌ ಚುರುಮುರಿ!

Subscribe to Filmibeat Kannada

ಏನ್‌ ಸಮಾಚಾರ, ಏನ್‌ ವಿಶೇಷ? : ಸ್ಯಾಂಡಲ್‌ವುಡ್‌ ಚುರುಮುರಿ!
ರವಿಚಂದ್ರನ್‌ರ ‘ಹಠವಾದಿ’ ಚಿತ್ರೀಕರಣ ಮುಕ್ತಾಯ, ದರ್ಶನ್‌ರ ಹುಟ್ಟುಹಬ್ಬ... ಅಭಿಮಾನಿಗಳಿಗೆ ‘ ಸುಂಟರಗಾಳಿ’!!!

  • ಫೆ. 16ರಂದು ದರ್ಶನ್‌ ಹುಟ್ಟುಹಬ್ಬ. ಹುಟ್ಟುಹಬ್ಬದ ಮಾರನೇ ದಿನವಾದ ಫೆ.17ರಂದು ದರ್ಶನ್‌ರ ಹೊಸ ಚಿತ್ರ ‘ ಸುಂಟರಗಾಳಿ’ ಬಿಡುಗಡೆಗೊಳ್ಳಲಿದೆ. ರಕ್ಷಿತಾ-ದರ್ಶನ್‌ ಅಭಿಮಾನಿಗಳಿಗೆ ಜಂಟಿ ಮಜ!
  • ಸಂದೇಶ್‌ ನಾಗರಾಜ್‌ ನಿರ್ಮಾಣದ ‘ಹಠವಾದಿ’ ಚಿತ್ರೀಕರಣ ಮುಕ್ತಾಯಗೊಂಡಿದೆ. ರವಿಚಂದ್ರನ್‌ ತಮ್ಮ ಸಕಲ ಕಲೆಗಳನ್ನು ಈ ಚಿತ್ರದಲ್ಲಿ ಪ್ರದರ್ಶಿಸಿದ್ದಾರೆ. ಸುಮಾರು ನಾಲ್ಕು ಕೋಟಿ ವೆಚ್ಚದ ಈ ಚಿತ್ರ ನನ್ನ ಇನ್ನೊಂದು ಕನಸು ಎಂದು ರವಿಚಂದ್ರನ್‌ ಹೇಳಿಕೊಂಡಿದ್ದಾರೆ.
  • ಗಾಂಧಿನಗರದಲ್ಲಿ ‘ಸಾಫ್ಟ್‌’ ನಿರ್ಮಾಪಕರೆಂದೇ ಖ್ಯಾತರಾದ ಶೈಲೇಂದ್ರ ಬಾಬು, ‘ಗೌರಮ್ಮ’ ಚಿತ್ರದ ಮೂಲಕ ಹಿಗ್ಗಿದ್ದರು. ಈಗ ಅವರ ಹೊಸ ಚಿತ್ರ ‘ಗಂಡ ಹೆಂಡತಿ’ಯದೇ ಎಲ್ಲೆಡೆ ಮಾತು. ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ರವಿ ಬೆಳಗೆರೆ ಪ್ರಮುಖ ಪಾತ್ರದಲ್ಲಿದ್ದಾರೆ. ಅಂಥ ಹಾಗೆ ಇದು ಹಿಂದಿಯ ‘ಮರ್ಡರ್‌’ ಚಿತ್ರದ ರಿಮೇಕ್‌ ಅನ್ನೋದು ಇನ್ನೊಂದು ವಿಶೇಷ.
  • 825 ಕನ್ನಡ ಚಲನಚಿತ್ರಗಳಿಗೆ ಪತ್ರಿಕಾ ಪ್ರಚಾರಕರ್ತರಾಗಿ ಕೆಲಸ ನಿರ್ವಹಿಸಿದ ಡಿ.ವಿ.ಸುಧೀಂದ್ರ ಅವರ ಸಾಧನೆಯನ್ನು ಬಿಂಬಿಸುವ ಡಿಡಿಡಿ.್ಚಜಜಿಠ್ಟಿಚ್ಝಟkಚ.್ಚಟಞ/ಠ್ಠಛಜಛಿಛ್ಞಿಛ್ಟಚ.್ಚಟಞ ವೆಬ್‌ಸೈಟನ್ನು ರಾಷ್ಟ್ರಪ್ರಶಸ್ತಿ ವಿಜೇತೆ ತಾರಾ, ಲೋಕಾರ್ಪಣೆ ಮಾಡಿದ್ದಾರೆ.
  • ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ ಅತ್ಯಂತ ಜನಪ್ರಿಯ ಗೀತೆಗಳನ್ನೊಳಗೊಂಡ ಎಂ.ಪಿ-3 ಸಿಡಿ ಈಗ ಲಭ್ಯ. ಇದರಲ್ಲಿ 52ಚಿತ್ರಗಳ ಜನಪ್ರಿಯ ಗೀತೆಗಳಿದ್ದು, ಬೆಲೆ ಕೇವಲ ಅರವತ್ತು ರೂಪಾಯಿ!
Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada