For Quick Alerts
  ALLOW NOTIFICATIONS  
  For Daily Alerts

  ‘ಅರಸು’ ಕಂಡ ರಜನಿಗೆ, ರೀಮೇಕ್‌ ಮಾಡುವ ಬಯಕೆ!

  By Staff
  |

  ಪುನೀತ್‌-ರಮ್ಯಾ-ಮೀರಾ ಜಾಸ್ಮಿನ್‌ರನ್ನು ಒಳಗೊಂಡ ‘ಅರಸು’ ನಿಧಾನವಾಗಿ ಚಿತ್ರಮಂದಿರಗಳ ಕಚ್ಚಿಕೊಳ್ಳುತ್ತಿದ್ದಾನೆ! ಈ ಮಧ್ಯೆ ‘ಅರಸು’ ಚಿತ್ರವನ್ನು ನಟ ರಜನೀಕಾಂತ್‌, ಚೆನ್ನೈನಲ್ಲಿ ವೀಕ್ಷಿಸಿದ್ದಾರೆ. ಚಿತ್ರದ ಬಗ್ಗೆ, ಪುನೀತ್‌ ಅಭಿನಯದ ಬಗ್ಗೆ ಅವರು ಪ್ರಶಂಸಿಸಿದ್ದಾರೆ.

  ತಮ್ಮ ಅಳಿಯ ಧನುಶ್‌ಗಾಗಿ ‘ಅರಸು’ವನ್ನು ತಮಿಳಿಗೆ ರೀಮೇಕ್‌ ಮಾಡಲು ರಜನಿ ಆಸಕ್ತರಾಗಿದ್ದಾರೆ. ಸದ್ಯಕ್ಕೆ‘ಜೋಗಿ’ ತಮಿಳಿಗೆ ರೀಮೇಕ್‌ ಆಗಿದ್ದು, ಆ ಚಿತ್ರದಲ್ಲಿ ಧನುಶ್‌ ಅಭಿನಯಿಸುತ್ತಿದ್ದಾರೆ. ತಿರುವಣ್ಣಮಲೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಮೀರಾ ಜಾಸ್ಮಿನ್‌ ಈ ಚಿತ್ರದ ನಾಯಕಿ.

  ಧನುಶ್‌ರ ಇತ್ತೀಚಿನ ಚಿತ್ರಗಳು, ತಮಿಳು ಚಿತ್ರರಂಗದಲ್ಲಿ ಹಿಟ್‌ ಮೇಲೆ ಹಿಟ್‌ ಆಗುತ್ತಿವೆ. ಹಿಟ್‌ ಸರಣಿ ಮುಂದುವರೆಯಲಿ ಎಂಬುದು ರಜನಿ ಆಶಯ. ಮತ್ತೊಂದು ಕಡೆ, ತಮಿಳು-ತೆಲುಗು ನಿರ್ಮಾಪಕರು ಕನ್ನಡ ಚಿತ್ರಗಳನ್ನು ರೀಮೇಕ್‌ ಮಾಡಲು, ಇತ್ತೀಚಿನ ದಿನಗಳಲ್ಲಿ ಮುಂದಾಗುತ್ತಿರುವುದು ಖುಷಿಯ ಸಂಗತಿ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X