»   » ರೆಕ್ಸ್‌ನಲ್ಲಿ ಮಹಿಳೆಯರ ನಿರ್ದೇಶನದ ಚಿತ್ರಗಳುಎಂಎಸ್‌ಎನ್‌ ಇಂಡಿಯಾದ ವರ್ಷದ ಮಹಿಳೆಯನ್ನು ನೀವು ಆರಿಸಿ

ರೆಕ್ಸ್‌ನಲ್ಲಿ ಮಹಿಳೆಯರ ನಿರ್ದೇಶನದ ಚಿತ್ರಗಳುಎಂಎಸ್‌ಎನ್‌ ಇಂಡಿಯಾದ ವರ್ಷದ ಮಹಿಳೆಯನ್ನು ನೀವು ಆರಿಸಿ

Posted By:
Subscribe to Filmibeat Kannada

ಮುಖಪುಟ  --> ಸ್ಯಾಂಡಲ್‌ವುಡ್‌  --> ಕನ್ನಡ ಚಿತ್ರ ಕುಟೀರ  --> ವರದಿಮಾರ್ಚ್‌ 08, 2003

ರೆಕ್ಸ್‌ನಲ್ಲಿ ಮಹಿಳೆಯರ ನಿರ್ದೇಶನದ ಚಿತ್ರಗಳು
ಎಂಎಸ್‌ಎನ್‌ ಇಂಡಿಯಾದ ವರ್ಷದ ಮಹಿಳೆಯನ್ನು ನೀವು ಆರಿಸಿ

ಬೆಂಗಳೂರು : ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ರೆಕ್ಸ್‌ ಚಿತ್ರಮಂದಿರದಲ್ಲಿ ಮಾರ್ಚ್‌ ತಿಂಗಳು ಪೂರಾ ವಾರಕ್ಕೊಮ್ಮೆ ಹೆಂಗಸರು ನಿರ್ದೇಶಿಸಿದ ಚಿತ್ರಗಳ ಪ್ರದರ್ಶನ ನಡೆಯಲಿದೆ. ಇದು ಎಂಎಸ್‌ಎನ್‌ ಇಂಡಿಯಾ ಕಂಪನಿಯ ಏರ್ಪಾಟು.

ಕಂಪನಿಯು ವರ್ಷದ ಮಹಿಳೆ ಪ್ರಶಸ್ತಿಯನ್ನು ಕೊಡಲು ಟ್ರೋಫಿಯಾಂದನ್ನು ಸಿದ್ಧಪಡಿಸಿದೆ. ದಿವಂಗತ ಕಲ್ಪನಾ ಚಾವ್ಲಾ, ಐಶ್ವರ್ಯ ರೈ, ಸುನಿತಾ ರಾಣಿ, ಪ್ರೀತಿ ರಿkುಂಟಾ ಹಾಗೂ ನೈನಾ ಲಾಲ್‌ ಕಿದ್ವಾಯಿ ಹೆಸರುಗಳನ್ನು ಕಂಪನಿ ಪ್ರಶಸ್ತಿಗಾಗಿ ಸೂಚಿಸಿದೆ. ಈ ಪೈಕಿ ಜನಮತ ಯಾರಿಗೆ ಹೆಚ್ಚು ಬೀಳುತ್ತದೋ ಅವರಿಗೇ ಪ್ರಶಸ್ತಿ. www.msm.co.in ವೆಬ್‌ಸೈಟ್‌ ಮೂಲಕ ನೀವೂ ನಿಮ್ಮ ಆಯ್ಕೆಯ ಹೆಂಗಸಿಗೆ ಓಟು ಹಾಕಬಹುದು. ಮಾರ್ಚ್‌ 27ರೊಳಗೆ ನಿಮ್ಮ ಆಯ್ಕೆಯ ಹೆಂಗಸಿನ ಹೆಸರು ಸೂಚಿಸಿ.

ಸಿನಿಮಾ ಪ್ರದರ್ಶನದ ಟೈಂ ಟೇಬಲ್‌ ನೋಟ್‌ ಮಾಡಿಕೊಳ್ಳಿಮಾರ್ಚ್‌ 14ರಂದು ಗುರಿಂದರ್‌ ಚೆಡ್ಡಾ ನಿರ್ದೇಶನದ ‘ಬೆಂಡಿಟ್‌ ಲೈಕ್‌ ಬೆಕ್‌ಹ್ಯಾಂ’, ಮಾರ್ಚ್‌ 21ರಂದು ದೀಪಾ ಮೆಹ್ತಾರ ‘ಬಾಲಿವುಡ್‌ ಹಾಲಿವುಡ್‌’ ಹಾಗೂ ಮಾರ್ಚ್‌ 28ರಂದು ಅಪರ್ಣ ಸೇನ್‌ ಅವರ ‘ಮಿಸ್ಟರ್‌ ಅಂಡ್‌ ಮಿಸಸ್‌ ಅಯ್ಯರ್‌’.

ಇದರಲ್ಲಿ ಕವಿತಾ ಲಂಕೇಶ್‌ ನಿರ್ದೇಶನದ ಚಿತ್ರಗಳನ್ನೂ ಸೇರಿಸಿದ್ದರೆ ಚೆನ್ನಾಗಿತ್ತು ಅನ್ನಿಸುವುದಿಲ್ಲವೇ?

(ಇನ್ಫೋ ವಾರ್ತೆ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada