»   » ಇಪ್ಪತ್ತು ಕನ್ನಡ ಚಿತ್ರಗಳಿಗೆ ಸರಕಾರದ ಸಬ್ಸಿಡಿ ಯೋಗ

ಇಪ್ಪತ್ತು ಕನ್ನಡ ಚಿತ್ರಗಳಿಗೆ ಸರಕಾರದ ಸಬ್ಸಿಡಿ ಯೋಗ

Subscribe to Filmibeat Kannada

ಬೆಂಗಳೂರು : 2003-04ನೇ ಸಾಲಿನಲ್ಲಿ ರಾಜ್ಯ ಸರಕಾರ ಸಬ್ಸಿಡಿ ನೀಡಲು ಇಪ್ಪತ್ತು ಚಿತ್ರಗಳನ್ನು ಆಯ್ಕೆ ಮಾಡಿದೆ. ಈ ಚಿತ್ರಗಳಿಗೆ ತಲಾ 10ಲಕ್ಷ ಸಬ್ಸಿಡಿ ನೀಡುವುದಾಗಿ ಸರಕಾರ ಘೋಷಿಸಿದೆ.

ರಾಜ್ಯಪ್ರಶಸ್ತಿ ವಿಜೇತ ಚಿಗುರಿದ ಕನಸು, ಶಾಂತಿ, ಚಂದ್ರಚಕೋರಿ, ಪ್ರವಾಹ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಪ್ರೀತಿ ಪ್ರೇಮ ಪ್ರಣಯ ಚಿತ್ರಗಳು ಸೇರಿದಂತೆ ಇಪ್ಪತ್ತು ಚಿತ್ರಗಳು ಸಬ್ಸಿಡಿ ಪಡೆದಿವೆ. ಸಬ್ಸಿಡಿಗಾಗಿ 61ಚಿತ್ರಗಳು ಕಣದಲ್ಲಿದ್ದವು.

ಬಿಂಬ, ಶ್ರಾವಣ ಸಂಭ್ರಮ, ಸಾಗರಿ, ಅಮಾಸ, ಪೂರ್ವಪರ, ನನಗೆ ನೀನು ನಿನಗೆ ನಾನು, ಬಿಸಿ ಬಿಸಿ, ಧಡ್‌ ಧಡ್‌, ಧರ್ಮ, ಮರಿಚಿಕೆ, ಯೋಧರು, ಖುಷಿ, ಮರ್ಮ, ಎಕ್ಸ್‌ ಕ್ಯೂಸ್‌ ಮಿ, ನಂಜುಂಡಿ ಮತ್ತು ಅಭಿ ಚಿತ್ರಗಳು ಸಬ್ಸಿಡಿಗೆ ಆಯ್ಕೆಯಾಗಿವೆ.

ಎಂ.ಎಸ್‌.ಸತ್ಯು, ವಸಂತ ಮೊಕಾಶಿ, ಭಾಸ್ಕರ್‌ರಾವ್‌, ಪ್ರೇಮಾ ಕಾರಂತ್‌, ಲಕ್ಕಪ್ಪ ಗೌಡ ನೇತೃತ್ವದ ಆಯ್ಕೆ ಸಮಿತಿ ಸಬ್ಸಿಡಿ ನೀಡಲು ಈ ಚಿತ್ರಗಳನ್ನು ಪಟ್ಟಿಮಾಡಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada