»   » ‘ಕಂಪನಿ’ ಸಿನಿಮಾದಲ್ಲಿ ಖಲ್ಲಾಸ್‌ ಹುಡುಗಿಯಾಗಿ ಮಿರಮಿರ ಮಿಂಚಿದ ಇಶಾ ಕೊಪ್ಪಿಕರ್‌ಗೆ ಯೋಗ, ರೇಖಿ, ಧ್ಯಾನ ಅಂದರೆ ಇಷ್ಟ.

‘ಕಂಪನಿ’ ಸಿನಿಮಾದಲ್ಲಿ ಖಲ್ಲಾಸ್‌ ಹುಡುಗಿಯಾಗಿ ಮಿರಮಿರ ಮಿಂಚಿದ ಇಶಾ ಕೊಪ್ಪಿಕರ್‌ಗೆ ಯೋಗ, ರೇಖಿ, ಧ್ಯಾನ ಅಂದರೆ ಇಷ್ಟ.

Posted By:
Subscribe to Filmibeat Kannada

*ಸುಂದ್ರು

ವಿಷ್ಣುವರ್ಧನ್‌ ಹಾಗೂ ರವಿಚಂದ್ರನ್‌ ಜತೆ ಕನ್ನಡದಲ್ಲಿ ನಟಿಸಿದ ನಂತರ ತಣ್ಣಗಾದಳು ಅಂದುಕೊಳ್ಳುವಷ್ಟರಲ್ಲಿ ರಾಮ್‌ಗೋಪಾಲ್‌ ವರ್ಮಾ ಚಿತ್ರದಲ್ಲಿ ಒಂದೇ ಒಂದು ಅರೆನಗ್ನ ನೃತ್ಯ ಮಾಡಿ, ಬಹುತೇಕರನ್ನು ಬೇಸ್ತು ಬೀಳಿಸಿದ ಇಶಾ ಕೊಪ್ಪಿಕರ್‌ ಯಶಸ್ಸಿನ ಗುಟ್ಟೇನು?
ಯೋಗ, ಆಧ್ಯಾತ್ಮ ಹಾಗೂ ಆಕೆಯ ಅಪ್ಪ.

ಇಶಾಗೆ ತನ್ನ ಸಾಮರ್ಥ್ಯದ ಅರಿವು ಚೆನ್ನಾಗೇ ಗೊತ್ತಂತೆ. ದಕ್ಷಿಣ ಭಾರತದ ಬಹುಭಾಷಾ ಚಿತ್ರಗಳ ನಾಯಕಿಯಾದವಳು ಬಾಲಿವುಡ್‌ ಎಂಬ ಕಾರಣಕ್ಕೆ ಕ್ಯಾಬರೆ ನರ್ತಕಿಯಾದಳಲ್ಲ ಅಂತ ಅನೇಕರು ಚುಚ್ಚಿದರೂ ಇಶಾ ಸುಮ್ಮನಾಗಲಿಲ್ಲ. ಒಂದಾದ ನಂತರ ಇನ್ನೊಂದು ಪಬ್‌ ಹಾಡಿಗೆ ಕುಣಿದಳು. ‘ಸೂರ್ಯವಂಶ’ ಚಿತ್ರದಲ್ಲಿ ವಿಷ್ಣು ಜತೆ ಸೀರೆಯುಟ್ಟು ಕುಣಿದ ಆ ಇಶಾಗೂ ಈಗ ಕಾಣುವ ಇಶಾಗೂ ಅಜಗಜಾಂತರ.

ಒಂದು ಕಾಲದಲ್ಲಿ ಮಳೆಯಲ್ಲಿ ನೆನೆಯಮ್ಮ ಅಂದರೆ, ಆಗೋಲ್ಲ ಅನ್ನುತ್ತಿದ್ದ ಇಶಾಗೆ ಈಗ ನಾಚಿಗೆ ಗೀಚಿಗೆ ಎಲ್ಲಾ ದೂರದಾಚೆಗೆ. ಈ ಬದಲಾವಣೆ ನಿಮ್ಮಲ್ಲಿ ಹೇಗಾಯಿತು ಅಂತ ಪ್ರಶ್ನೆ ಎಸೆದರೆ, ‘ಒಮ್ಮೆ ಧ್ಯಾನಕ್ಕೆ ಕೂತಿದ್ದೆ. ಏನೇನೋ ಯೋಚನೆಗಳು ಸುಳಿದಾಡಿದವು. ಆಗ ರಾಮ್‌ಗೋಪಾಲ್‌ ವರ್ಮಾ ಕಂಪನಿ ಚಿತ್ರಕ್ಕೆ ಕುಣಿಯಬೇಕು ಎಂಬ ಆಫರ್‌ ಕೊಟ್ಟಿದ್ದರು. ಮನಸ್ಸಲ್ಲಿ ಆ ಆಫರನ್ನು ಒಪ್ಪಿಕೊಳ್ಳಲೋ ಬೇಡವೋ ಎಂಬ ಗೊಂದಲ. ಧ್ಯಾನಾವಸ್ಥೆಯಲ್ಲಿದ್ದಾಗ ನನ್ನ ಮನಸ್ಸು ಒಪ್ಪಿಕೋ ಅಂದಿತು. ಒಪ್ಪಿಕೊಂಡೆ. ಆಮೇಲೆ ನನ್ನ ಕೆರಿಯರ್ರಿನ ದಿಕ್ಕೇ ಬದಲಾಯಿತು’ ಅಂತಾರೆ ಇಶಾ.

ಅಂದಹಾಗೆ, ಇಶಾಗೆ ಈಗ ರೇಖಿ ಕೂಡ ಕರಗತ. ಸಿನಿಮಾ ಕುಣಿತದ ನಂತರ ಸಿಗುವ ಬಿಡುವಿನ ಸಮಯವನ್ನು ಈಕೆ ಕಳೆಯುವುದು ಯೋಗ, ರೇಖಿ ಹಾಗೂ ಧ್ಯಾನದಲ್ಲಿ. ವರಸಿದ್ಧಿ ವಿನಾಯಕ ಈಕೆಯ ಮೆಚ್ಚಿನ ದೇವರಂತೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada