»   » ‘ಬೈ2’ : ಹುಡುಗ ಹುಡುಗಿಯ ಪ್ರೇಮ ಸಲ್ಲಾಪ

‘ಬೈ2’ : ಹುಡುಗ ಹುಡುಗಿಯ ಪ್ರೇಮ ಸಲ್ಲಾಪ

Posted By:
Subscribe to Filmibeat Kannada


ಚಿತ್ರದ ತುಂಬ ನಾಯಕ-ನಾಯಕಿ ಇದ್ದರೆ ಹೇಗೆ? ಅಂತಹ ಚಿತ್ರವೊಂದರಲ್ಲಿ ಅಭಯ್‌ ಮತ್ತು ಸುನೀತಾ ವರ್ಮ ಅಭಿನಯಿಸುತ್ತಿದ್ದಾರೆ. ಚಿತ್ರದ ಹೆಸರು ‘ಬೈ2’

ಕಿರುತೆರೆ ಮತ್ತು ಹಿರಿತೆರೆ ನಟ ಶ್ರೀನಗರ ಕಿಟ್ಟಿ ಅವರಿಗೆ, ‘ಗಿರಿ’ಚಿತ್ರ ಗರಿ ಮೂಡಿಸಲಿಲ್ಲ. ಹೀಗಾಗಿ ಅವರು ತಮ್ಮ ಹೆಸರನ್ನು ‘ಅಭಯ್‌’ ಎಂದು ಬದಲಿಸಿಕೊಂಡಿದ್ದಾರೆ. ಇನ್ನಾದರೂ ಸ್ಯಾಂಡಲ್‌ವುಡ್‌ನಿಂದ ಅಭಯ ಸಿಗಬಹುದೇನೋ ಗೊತ್ತಿಲ್ಲ.

ಈ ನಡುವೆ ಅವರು ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಹೆಸರು ‘ಬೈ2’. ಇನ್ನೂ ಒಂದು ವಿಶೇಷವೆಂದರೆ ಈ ಚಿತ್ರದಲ್ಲಿ ನಾಯಕ-ನಾಯಿಕಿಯದೇ ದರ್ಬಾರು! ಎರಡು ಪಾತ್ರಗಳನ್ನಿಟ್ಟುಕೊಂಡು ‘ಬೈ2’ ನಿರ್ದೇಶನಕ್ಕೆ ನಿಂತವರು ದ್ವಾರ್ಕಿ ರಾಘವನ್‌.

ಕನ್ನಡದಲ್ಲಿ ಈ ಹಿಂದೆ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ದ್ವಾರ್ಕಿ ರಾಘವನ್‌ಗೆ ‘ಬೈ2’ಬಗ್ಗೆ ಅಪಾರ ವಿಶ್ವಾಸ. ರೋಮ್ಯಾಂಟಿಕ್‌ ಲವ್‌ಸ್ಟೋರಿ, ಸೆಂಟಿಮೆಂಟ್‌, ಕಾಡ ಸೊಬಗಿನ ಚಿತ್ರೀಕರಣ, ವಿಭಿನ್ನ ಛಾಯಾಗ್ರಹಣ. ಸ್ಪೆಷಲ್‌ ಎಫೆಕ್ಟ್‌ ಎಲ್ಲವನ್ನೂ ಹದವಾಗಿ ಮಿಶ್ರಣ ಮಾಡಿ ಈ ಚಿತ್ರದ ಶ್ರೀಮಂತಿಕೆ ಹೆಚ್ಚಿಸುತ್ತಿರುವುದಾಗಿ ರಾಘವನ್‌ ಸುದ್ದಿಗಾರರ ಬಳಿ, ತಮ್ಮ ಪ್ರಯತ್ನವನ್ನು ವಿವರಿಸಿದರು.

ವಿ.ಆರ್‌.ಮಿರಾಕಲ್‌ ಮೂವೀಸ್‌ ಹೆಸರಲ್ಲಿ ಆರ್‌.ಜಗದೀಶ್‌ ಚಿತ್ರ ನಿರ್ಮಿಸುತ್ತಿದ್ದಾರೆ. 60ದಿನಗಳ ಕಾಲ ಕೇರಳ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಅರಣ್ಯಗಳಲ್ಲಿ ಚಿತ್ರೀಕರಣ ನಡೆಸುವ ಉದ್ದೇಶ ರಾಘವನ್‌ ಅವರಿಗಿದೆ. ವಿಜಯ ಆಂಟೋಣಿ ಸಂಗೀತ ನೀಡಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada