»   » ಶ್‌...ಹಂಸಲೇಖಾ ಎಂ.ಎ. ಓದುತ್ತಿದ್ದಾರೆ !

ಶ್‌...ಹಂಸಲೇಖಾ ಎಂ.ಎ. ಓದುತ್ತಿದ್ದಾರೆ !

Posted By: Staff
Subscribe to Filmibeat Kannada

ಹಂಸಲೇಖ ಸಾಹಿತ್ಯ ಇನ್ನು ಮುಂದೆ ಕಂಗ್ಲೀಷನ್ನು ಮೀರಿ ಬೆಳೆಯುವುದೆ?
ಇಂಥಾ ಒಂದು ಆಶಯವನ್ನು ಸದ್ಯಕ್ಕೆ ಇಟ್ಟುಕೊಳ್ಳಬಹುದು. ಯಾಕೆಂದರೆ, ಹಂಸಲೇಖ ಈಗ ಸಾಹಿತ್ಯದ ವಿದ್ಯಾರ್ಥಿ. ತಲೆತುಂಬಾ ಹರಿದಾಡುತ್ತಿರುವುದು ಕೇಶೀರಾಜನ ಶಬ್ದಮಣಿದರ್ಪಣ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಥಮ ಎಂ.ಎ.ಯನ್ನು ಹಂಸ್‌ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ. ಮಾರ್ಚ್‌ 31ರಿಂದ ಏಪ್ರಿಲ್‌ 5ರವರೆಗೆ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಸಂಪರ್ಕ ಕಾರ್ಯಕ್ರಮದ ಅಷ್ಟೂ ದಿನ ಹಂಸ್‌ ಪೇಪರ್‌- ಪೆನ್ನು ಹಿಡಿದು ಪಾಠ ಕೇಳಿದ್ದೇ ಇದಕ್ಕೆ ಸಾಕ್ಷಿ.

ಹಂಸಲೇಖ ಕೇಳಿದ ಪಾಠವನ್ನು ಶ್ರದ್ಧೆಯಿಂದ ನೋಟ್ಸ್‌ ಮಾಡಿಕೊಳ್ಳುತ್ತಿದ್ದರು. ಅವರ ಮೊಬೈಲ್‌ ಫೋನೂ ಮೌನವಾಗಿತ್ತು. ಕಾರಣ- ಹಂಸ್‌ ಅದನ್ನು ಆಫ್‌ ಮಾಡಿದ್ದರು. ಪಾಠದ ನಡುವೆ ಯಾವ ಕಿರಿಕಿರಿಯೂ ಬೇಡ ಎಂಬಷ್ಟು ತನ್ಮಯತೆ ಅವರಲ್ಲಿ. ಪೇಪರಿನವರು ಫೋಟೋ ತೆಗೆಯಲು ಬಂದಾಗ, ದಯವಿಟ್ಟು ನನ್ನನ್ನು ಹೀರೋ ಮಾಡಬೇಡಿ ಅಂತ ನಮ್ರವಾಗಿ ಕೇಳಿ, ಬರೆದಿಟ್ಟುಕೊಂಡಿದ್ದ ನೋಟ್ಸ್‌ ಮೇಲೆ ಕಣ್ಣು ನೆಟ್ಟರು.

ಸಂಪರ್ಕ ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಹಂಸ್‌ ಜೊತೆ ಪಾಠ ಕೇಳಿದ ಹೊಸ ಅನುಭವ. ಅದನ್ನು ಹಸಿರಾಗಿಟ್ಟುಕೊಳ್ಳಲೊಂದು ಆಟೋಗ್ರಾಫ್‌. ಹಂಸ್‌ ಜೊತೆ ನಿಂತು ತೆಗೆಸಿಕೊಂಡ ಫೋಟೋ ಕೂಡ ಕೆಲವರ ಬಳಿ ಉಂಟು.

ಪರೀಕ್ಷೆಗೆ ಇನ್ನು ತಿಂಗಳು ಮಾತ್ರ ಉಳಿದಿದೆ. ಹಂಸ್‌ ಗಂಭೀರವಾದ ಅಧ್ಯಯನದಲ್ಲಿ ತೊಡಗಿದ್ದಾರೆ ಎಂಬುದು ಸ್ಯಾಂಡಲ್‌ವುಡ್‌ನ ಮಾತು. ಮೊನ್ನೆ ವಿಂಡ್ಸರ್‌ ಮ್ಯಾನರ್‌ನಲ್ಲಿ ರಾಕ್‌ಲೈನ್‌ ನಿರ್ಮಿಸಿ ನಟಿಸಿರುವ ಡಕೋಟಾ ಎಕ್ಸ್‌ಪ್ರೆಸ್‌ ಚಿತ್ರದ ಕೆಸೆಟ್‌ ಬಿಡುಗಡೆ ಸಮಾರಂಭದಲ್ಲಿ ಶಬ್ದಮಣಿದರ್ಪಣ ಅನುರಣಿಸಿತು. ಕೆಸೆಟ್ಟಿನ ಕವರು ಪರಪರ ಸದ್ದು ಮಾಡಿದಾಗ, ಹಂಸ್‌ ಹೇಳಿದ್ದು ಶಬ್ದಮಣಿದರ್ಪಣ. ಹಾಗಂದು ಅವರು ನಕ್ಕರು. ಪಕ್ಕದಲ್ಲಿದ್ದವರಿಗೆ ನಗು ಯಾತಕ್ಕೆಂದು ಅರ್ಥವಾಗಲಿಲ್ಲ. ಕನ್ನಡ ಎಂ.ಎ. ವಿದ್ಯಾರ್ಥಿಗಳಿಗಂತೂ ಆಗುತ್ತದೆ.

English summary
Hamsalekha is Kannada M.A.student of Karnataka Open University
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada