»   » ಮೆಕ್ಯಾನಿಕ್‌ ಕಾಂಬ್ಳಿ : ಇದು ಸಿನಿಮಾ ಅವತಾರ

ಮೆಕ್ಯಾನಿಕ್‌ ಕಾಂಬ್ಳಿ : ಇದು ಸಿನಿಮಾ ಅವತಾರ

Posted By: Staff
Subscribe to Filmibeat Kannada

ಅನರ್ಥ್‌ ಎಂಬ ಹಿಂದಿ ಸಿನಿಮಾದಲ್ಲಿ ನಾನು ಮೆಕ್ಯಾನಿಕ್‌. ಬೇಜಾರು ಅಂದ್ರೆ ನನ್ನದು ಬ್ಯಾಚುಲರ್‌ ಪಾತ್ರ. ನಾನು ಹೀಗಿದೀನಿ ನೋಡಿ, ಅದಕ್ಕೇ ಇರಬೇಕು ನನಗೆ ಹಿರೋಯಿನ್‌ ಕೊಟ್ಟಿಲ್ಲ :)
ಮತ್ತೆ ಕ್ರಿಕೆಟ್‌ಗೆ ಬಂದೇ ಬರುತ್ತೇನೆ ಎಂಬ ಆತ್ಮವಿಶ್ವಾಸವುಳ್ಳ ವಿನೋದ್‌ ಕಾಂಬ್ಳಿ ಮಾತಿದು. ಕ್ರಿಕೆಟ್‌ ಕಣದಿಂದ ಹೊರಗುಳಿದು ಬಹು ದಿನಗಳೇ ಕಳೆದಿದ್ದರೂ ಅದೇ ಉತ್ಸಾಹ. ಒಂದು ಕಡೆ ನಿಲ್ಲುವುದು ಅಂದರೆ ನನಗೆ ಆಗಲ್ಲಪ್ಪ, ಕುಣಿಯುವುದು ತೊಂದರೆ ಅಲ್ಲವೇ ಅಲ್ಲ ಅಂತ ನಿಂತಲ್ಲೇ ಕುಲುಕಾಡುವ ಕಾಂಬ್ಳಿ ಕಳೆದ ವಾರಾಂತ್ಯ ಕಳೆದದ್ದು ಬೆಂಗಳೂರಲ್ಲಿ. ಟೆನ್‌ ಸ್ಪೋರ್ಟ್ಸ್‌ ಎಂಬ ಚಾನೆಲ್ಲಿನಲ್ಲಿ ಗ್ರಾಹಕರ ಫೋನು ಕರೆಗಳಿಗೆ ಉತ್ತರ ಕೊಡುವ ಕೆಲಸ ತುಂಟ ಕಾಂಬ್ಳಿಯದ್ದು. ಇವರ ಜೊತೆ ಮಾಡೆಲ್‌ ನೇತ್ರಾ ರಘುರಾಮ್‌ ಕೂಡ ಉಂಟು. ಬೆಂಗಳೂರಿಗೆ ಬಂದದ್ದೂ ಈ ಚಾನೆಲ್ಲಿನ ಕೆಲಸದ ಮೇಲೆಯೇ. ಆದರೆ ಆಡಿದ ಮಾತುಗಳು ಕ್ರಿಕೆಟ್‌ ಮತ್ತು ಸಿನಿಮಾ ಕುರಿತು.

ಈಗಲೂ ಪಟ್ಟಿ ಬಿಡದ ಕಾಂಬ್ಳಿ ದಿನಾಲು ತಪ್ಪದೇ ಕ್ರಿಕೆಟ್‌ ಅಭ್ಯಾಸ ಮಾಡುತ್ತಾರೆ. ಈ ತಿಂಗಳ ಅಂತ್ಯದಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗುತ್ತಿರುವ ಕಾಂಬ್ಳಿ, ಅಲ್ಲಿ ನಾಲ್ಕೂವರೆ ತಿಂಗಳು ಲೀಗ್‌ ಆಡಲಿದ್ದಾರೆ. ಅಲ್ಲಿಂದ ಬಂದ ಮೇಲೆ ನಾನು ಮತ್ತೆ ಫುಲ್‌ ಟೈಂ ಕ್ರಿಕೆಟರ್‌ ಆಗುವುದರಲ್ಲಿ ಅನುಮಾನವೇ ಇಲ್ಲ. ನನ್ನ ಪುನರಾಗಮನ ಅರ್ನಾಲ್ಡ್‌ ಚ್ವಾಜೆನೆಗರ್‌ ಸಿನಿಮಾ ಮರುಪ್ರವೇಶಿದಂತೆ ಇರುತ್ತದೆ ಎನ್ನುವ ಕಾಂಬ್ಳಿ ಮಾತಲ್ಲಿ ಆತ್ಮವಿಶ್ವಾಸ ಭರಪೂರ.

ಕಾಂಬ್ಳಿ ಮಾತುಗಳಲ್ಲಿ ಅವರ ಸಿನಿಮಾ ಮತ್ತು ಅಮಿತಾಬ್‌....

ಸದ್ಯಕ್ಕೆ ನನಗೆ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಸುನಿಲ್‌ ಶೆಟ್ಟಿ, ಪ್ರೀತಿ ಜಿಂಗಾನಿ, ಆಶುತೋಷ್‌ ರಾಣಾ, ಸಂಜಯ್‌ ದತ್‌, ಜಾನಿ ಲಿವರ್‌, ರವೀನಾ ಟಂಡನ್‌ ಮೊದಲಾದವರು ನಟಿಸಿರುವ ಅನರ್ಥ್‌ ಎಂಬ ಚಿತ್ರದಲ್ಲಿ ನನಗೆ ಮೆಕ್ಯಾನಿಕ್‌ ಪಾತ್ರ ಕೊಟ್ಟಿದಾರೆ. ಚಿತ್ರದಲ್ಲಿ ನನಗೆ ಅಮ್ಮ ಉಂಟು. ಆದರೆ ಜೊತೆಗೆ ಹಾಡಿ- ಕುಣಿಯಲು ನಾಯಕಿಯಿಲ್ಲ. ಸೋ ಸ್ಯಾಡ್‌ :)

ಅಮಿತಾಬ್‌ ಬಚ್ಚನ್‌ ಅವರನ್ನು ಮಾತಾಡಿಸುವುದು ನನ್ನ ಕನಸುಗಳಲ್ಲಿ ಮುಖ್ಯವಾದದ್ದಾಗಿತ್ತು. ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಸಚಿನ್‌ ಜೊತೆ ಹೋಗಿ, ಅದನ್ನು ನನಸಾಗಿಸಿಕೊಂಡೆ. ಅಲ್ಲಿ ಅವರೊಡನೆ ಮಾತಾಡಿದ ಕ್ಷಣಗಳು ಜೀವನದಲ್ಲಿ ಮರೆಯಲಾಗದಂಥವು. ನಾನು ಮೆಚ್ಚಿರುವ ಸಿನಿಮಾ ಡೈಲಾಗ್‌ಗಳನ್ನು ಅಮಿತಾಬ್‌ರ ಬಾಯಲ್ಲಿ ಮತ್ತೊಮ್ಮೆ ಕೇಳಿ ಖುಷಿಪಟ್ಟೆ. ಬಚ್ಚನ್‌ಜೀ ನಿಮ್ಮ ಜೊತೆ ಸಿನಿಮಾದಲ್ಲಿ ಆ್ಯಕ್ಟ್‌ ಮಾಡುವ ಆಸೆಯಿದೆ ಅಂತ ಮುಂದೆ ಒಂದು ದಿನ ಖಂಡಿತ ಕೇಳೇ ಕೇಳ್ತೀನಿ.

English summary
Kambli all set to score in Bollywood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada