»   » ಉಪ್ಪಿ ಹಾಡಿದ ಎಚ್‌ಟುಓ ಗೀತೆಗಳ ಯಶಸ್ಸು

ಉಪ್ಪಿ ಹಾಡಿದ ಎಚ್‌ಟುಓ ಗೀತೆಗಳ ಯಶಸ್ಸು

Posted By: Staff
Subscribe to Filmibeat Kannada

'ಚಿನ್ನಾರಿಮುತ್ತ "ಎಂದೇ ಈಗಲೂ ಎಲ್ಲರಿಂದ ಕರೆಸಿಕೊಳ್ಳುವ ವಿಜಯ ರಾಘವೇಂದ್ರ ಗಾಂಧಿನಗರಿಗರ ಕನಸಿನ ಹುಡುಗ. 'ನಿನಗಾಗಿ" ಚಿತ್ರದ ಈತನ ಅಭಿನಯ ಕಂಡು ಒಬ್ಬೊಬ್ಬರು ಒಂದೊಂದು ರೀತಿ ಹೊಗಳಲು ಶುರುವಿಟ್ಟಿದ್ದಾರೆ. ಇದಾವುದರ ಪರಿವೆಯೂ ಇಲ್ಲದಂತಿರುವ ವಿಜಯ ರಾಘವೇಂದ್ರ ನಾನು ಮೊದಲು ಒಬ್ಬ ಪರಿಪೂರ್ಣ ನಟನಾಗಬೇಕು ಎಂದು ಹೇಳಿ ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದಾನೆ.

1. ಚಿತ್ರ ನಟ ಆಗಬೇಕು ಅನ್ನೋದು ನಿಮ್ಮ ಕನಸಾಗಿತ್ತಾ ?

ಖಂಡಿತ ಇಲ್ಲ. ನನಗೆ ಡಾಕ್ಟರಾಗಬೇಕು. ತಪ್ಪಿದ್ರೆ ಬ್ಯುಸಿನೆಸ್‌ಮನ್‌ ಆಗಬೇಕು ಅಂತ ಆಸೆಯಿತ್ತು. ಆಕಸ್ಮಿಕವಾಗಿ ಬಾಲನಟನಾದೆ. ಪ್ರಶಸ್ತಿ ಕೂಡ ಬಂತು. ಈಗ ಮತ್ತೆ ಅಕಸ್ಮಿಕವಾಗೇ ನಾಯಕನಟ ಆಗಿದೀನಿ !

2. ಚಲನಚಿತ್ರಗಳಲ್ಲಿ ನಾಯಕ ನಟನ ವಿಜೃಂಭಣೆ ಅಗತ್ಯವಾ ?

ನೇರವಾಗಿ ಹೇಳ್ತೀನಿ. ಹೀರೋ, ಹೀರೋಯಿಸಂ, ಇದರಲ್ಲೆಲ್ಲ ನಂಗೆ ನಂಬಿಕೆ ಇಲ್ಲ. ಚಿತ್ರಗಳಲ್ಲಿ ನಾಯಕನನ್ನ ಸಾಮಾನ್ಯ ಮನುಷ್ಯರ ರೀತಿ ತೋರಿದ್ರೆ ಸಾಕು.

3. ನಿಮ್ಮ ಬದುಕಿನ ಮಹದಾಸೆ ಏನು ?

ನಟನಾಗಿ ಒಳ್ಳೆ ಹರು ಮಾಡಬೇಕು. ನಾನೇ ಒಂದಷ್ಟು ಚಿತ್ರಗಳನ್ನು ನಿರ್ದೇಶಿಸಬೇಕು...

4. ನಿಮಗೆ ತಮಾಷೆ ಅನ್ನಿಸಿದ ಅದೇ ಸಂದರ್ಭಕ್ಕೆ ರೋಮಾಂಚನ ಉಂಟುಮಾಡಿದ ಪ್ರಸಂಗ ಹೇಳಿ...

ಕೊಟ್ರೇಶಿ ಕನಸು ಸಿನಿಮಾ ಬಿಡುಗಡೆ ಆಗಿತ್ತು. ಒಂದು ಮಧ್ಯಾಹ್ನ ಮಲಗಿದ್ದಾಗ ನಂಬೆ ರಾಷ್ಟ್ರ ಪ್ರಶಸ್ತಿ ಬಂದಂತೆ ಕಸುಬಿತ್ತು. ಥತ್‌, ಅಂದುಕೊಂಡು ಸೈಕಲ್ಲೇರಿ ಒಂದು ರೌಂಡ್‌ ಹೋಗುವ ಅಂತ ಹೊರಬಂದ್ರೆ ದಾರೀಲಿ ಸಿಕ್ಕವರೆಲ್ಲ ಕಂಗ್ರಾಟ್ಸ್‌ ಹೇಳಿದ್ರು. ನಿಜಕ್ಕೂ ನಂಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು ! ಅದು ತಮಾಷೆಯೂ ಹೌದು, ರೋಮಾಂಚನವೂ ಹೌದು, ಏನಂತೀರಿ?

English summary
My aim is to direct some good movies - Vijaya Raghavendra
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada