»   » ‘ಮಲ್ಲ’ನಿಗೆ ನೂರರ ಸಂಭ್ರಮ

‘ಮಲ್ಲ’ನಿಗೆ ನೂರರ ಸಂಭ್ರಮ

Posted By: Staff
Subscribe to Filmibeat Kannada
Ravichandrans Malla
'ಮಲ್ಲ"ನಿಗೆ ನೂರಾಯ್ತು. ಬಿಡುಗಡೆಯಾದ ಮೊದಲ ದಿನದಿಂದಲೂ ಟಿಕೆಟ್‌ ದರ 5 ರೂಪಾಯಿ ಹೆಚ್ಚು ಮಾಡಿದರೂ, ನಾಲ್ಕು ಷೋಗಳಿರುವ ಕಡೆಗಳಲ್ಲಿ ಐದು ಷೋ ನಡೆಸಿದರೂ ಚಿತ್ರ ಮಂದಿರಗಳಲ್ಲಿನ ಜನ ಜಂಗುಳಿಯನ್ನು ಹದ್ದುಬಸ್ತಿಗೆ ತರಲು ಪೊಲೀಸರಿಂದಲೂ ಸಾಧ್ಯವಾಗಲಿಲ್ಲ.

ಶತದಿನೋತ್ಸವವನ್ನಾಚರಿಸಿದ 'ಮಲ್ಲ "ನಿಂದ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಯಶಸ್ವಿ ಸಂಗೀತ ನಿರ್ದೇಶಕರೆನಿಸಿದ್ದಾರೆ. 'ಅಯ್ಯ" ಚಿತ್ರಕ್ಕೆ ಅವರದೇ ಸಂಗೀತ ನೀಡಲಿದ್ದಾರೆ. 'ಮಲ್ಲನ ನಾಯಕಿ ಪ್ರಿಯಾಂಕ ತ್ರಿವೇದಿಯಿಂದಲೇ ಚಿತ್ರ ಗೆದ್ದಿದು"್ದ ಅನ್ನುವುದು ಬಹುತೇಕ ಚಿತ್ರ ರಸಿಕರ ಅಭಿಪ್ರಾಯ. 'ಪ್ರಿಯಾಂಕ ತ್ರಿವೇದಿ ಉಪ್ಪಿಯ ಹೆಂಡತಿಯಾಗಿದ್ದರಿಂದಲೇ ಚಿತ್ರ ಗೆದ್ದಿದ್ದು "ಎಂಬುದು ಗಾಂಧಿನಗರದ ಮೂಲೆಯಿಂದ ಕೇಳಿ ಬರುತ್ತಿದೆ.

ಒಟ್ಟಿನಲ್ಲಿ 'ಮಲ್ಲ "ಗೆದ್ದಿದೆ. ರಾಮು ಅವರೂ ಗೆದ್ದಿದ್ದಾರೆ. 'ದುರ್ಗಿ"ಯ ಅಬ್ಬರ ಒಂದು ವಾರಕ್ಕೇ ಇಳಿದು ಹೋಗಿದೆಯಂತೆ. ಹೊಗ್ಲಿ ಬಿಡಿ. ಕೈ ಹಾಕಿದ್ದೆಲ್ಲಾ ಬಂಗಾರವಾಗಲು ಸಾಧ್ಯವೇ? 'ಮಲ್ಲ "ತಂದ 'ಕಪ್ಪ"ದಲ್ಲಿ 'ದುರ್ಗಿ"ಗೆ ಸ್ವಲ್ಪ ಕಪ್ಪ ಒಪ್ಪಿಸಿದಂತಾಯ್ತು. ಅಷ್ಟೆ. ಕೋಟಿ ರಾಮು ಯಾವುದಕ್ಕೂ ಹಿಂಜರಿಯುವವರಲ್ಲ. ದರ್ಶನ್‌ ಅಭಿನಯದ 'ಕಲಾಸಿಪಾಳ್ಯ"ವನ್ನು ರಾಮು ತಮ್ಮ ಮುಂದಿನ ಚಿತ್ರವಾಗಿ ಸ್ವೀಕರಿಸಿದ್ದಾರೆ. ಅದೂ ಗೆಲ್ಲಲಿ. ದರ್ಶನ್‌ ಆದಷ್ಟು ಬೇಗ ಕನ್ನಡ ಕಲಿಯಲಿ.

'ಮಲ್ಲ "ನೂರಾದರೂ ಮಸ್ತು ; 'ರಾಮಕೃಷ್ಣ "ಮೂರೇ ದಿನಕ್ಕೆ ಸುಸ್ತು

ಕ್ರೇಜಿಸ್ಟಾರ್‌ ರವಿಯವರ 'ಮಲ್ಲ "ನೂರನೇ ದಿನ ಓಡುತ್ತಿದ್ದರೆ, ಇತ್ತ 'ರಾಮಕೃಷ್ಣ " ಮೂರೇ ದಿನಕ್ಕೆ ಥಿಯೇಟರ್‌ ಖಾಲಿ. ನಿರ್ಮಾಪಕರ ಜೋಬೂ ಅಷ್ಟೆ. ಸುಮಾರು ಎರಡು ದಶಕಗಳ ಹಿಂದೆ ತಮಿಳಿನಲ್ಲಿ ಬಂದ 'ಆನ್‌..ಪಾವಂ.. " ಚಿತ್ರದಲ್ಲಿ ಪಾಂಡಿಯನ್‌ ಮತ್ತು ಪಾಂಡಿಯರಾಜ ನಟಿಸಿದ ಆ ಚಿತ್ರ ಸೂಪರ್‌ ಹಿಟ್‌ ಆಗಿತ್ತಂತೆ.

'ಆನ್‌..ಪಾವಂ.. " ಅಂದರೆ 'ಅಯ್ಯೋ ಪಾಪ..! " ಎಂದು. ಅದೇ ರೀತಿ ಕನ್ನಡದ 'ರಾಮಕೃಷ್ಣ "ವನ್ನೂ 'ರಾಮಾ...ಕೃಷ್ಣಾ...! " ಎಂದು ಓದಿಕೊಂಡರೆ ಒಳ್ಳೇದು ಎಂದು ಯಾರೋ ಹೇಳಿದ್ದು ನಿಜ ಅನ್ನಿಸುವಂತಿದೆ.

ರವಿಯವರ ಅದೃಷ್ಟ ಚೆನ್ನಾಗಿದೆ. ಉಪ್ಪಿಯ 'ಓಂಕಾರ" ನಾದದ ಶಬ್ದವೇ ಕೇಳದೆ ಸುಮಾರು ತಿಂಗಳೇ ಆಗಿಬಿಟ್ಟಿದೆ. ಗಾಂಧಿನಗರದ ಗುಟ್ಟು, ಗಮ್ಮತ್ತನ್ನ ಬಲ್ಲವರಾರು?

English summary
Ravichandrans Malla reached successful 100days, but another side Ramakrishna not brought hopeful result

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada