»   » ಪ್ರೇಮ ಅಂದ್ರೆ ಯಾರು..?

ಪ್ರೇಮ ಅಂದ್ರೆ ಯಾರು..?

Posted By: Staff
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಪ್ರೇಮ ಅನ್ನೋ ನಟಿಮಣಿ ಇದ್ದಳು. ಎರಡು ಸೂಪರ್‌ ಹಿಟ್‌ ಚಿತ್ರಗಳನ್ನೂ ಕೊಟ್ಟಿದ್ದಳು ಅಂದ್ರೆ ಕನ್ನಡ ಚಿತ್ರ ರಸಿಕರು ನಂಬುವಂತಿಲ್ಲ. ಹಾಗಾಗಿದೆ ಪ್ರೇಮಾ ಪರಿಸ್ಥಿತಿ. ಬಿಡುಗಡೆಗೆ ತಯಾರಾಗಿರುವ ಪಾಂಡುರಂಗ ವಿಠಲ ಚಿತ್ರದಲ್ಲೂ ಪ್ರೇಮ ನಏಸಿದ್ದಾಳೆ. ಅದು ಅವಳ ಕೊನೆಯ ಚಿತ್ರವಾಗಲಿದೆ ಎಂದು ಗಾಂಧಿನಗರ ಹೇಳುತ್ತಿದೆ.

ಪ್ರೇಮ ಓಂ ಚಿತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟ ಪ್ರೇಮ ನಮ್ಮೂರ ಮಂದಾರ ಹೂವೆ, ಉಪೇಂದ್ರ, ಯಜಮಾನಗಳಂತಹ ಹಲವಾರು ಸೂಪರ್‌ ಹಿಟ್‌ ಚಿತ್ರಗಳಲ್ಲಿ ಕಾಣಿಸಿದ್ದಳು. ನಟಿಯಾದವಳಿಗಿರಬೇಕಾದ ಎಲ್ಲವೂ ಅವಳಲ್ಲಿತ್ತು. ಜೊತೆಗೆ ಸ್ವಲ್ಪ ಹೆಚ್ಚೇ ದುರಹಂಕಾರವಿತ್ತು ಎನ್ನುತ್ತದೆ ಗಾಂಧಿನಗರ. ಅದೇನೇ ಇರಲಿ ಪ್ರೇಮಾಳ ಕೊನೆಯ ಅಧ್ಯಾಯದ ಕಡೇ ಪುಟವೇ ಪಾಂಡುರಂಗ ವಿಠಲ ವಾಗುವ ಸಾಧ್ಯತೆ ಇದೆಯಂತೆ.

ಕಾರಣ ಪ್ರೇಮಾಗೀಗ ಕನ್ನಡದಲ್ಲಿ ಅವಕಾಶಗಳಿಲ್ಲ. ಆಕೆ ನಟಿಸಬಹುದಾದಂತಹ ನಾಯಕನೂ ಇಲ್ಲ. ಕನ್ನಡದ ಬಹುತೇಕ ನಾಯಕರಿಗೆ ಪರಭಾಷಾ ನಟಿಯರೇ ಬೇಕು. ಹೀಗಾಗಿ ಪ್ರೇಮ ಅನಿವಾರ್ಯ ಕಾರಣದಿಂದ ಹಿಂದಕ್ಕೆ ಸರಿಯಬೇಕಾದ ಕಾಲ ಕೂಡಿ ಬಂದಿದೆ. ತನ್ನ ಗರ್ವ, ಅಸಡ್ಡೆಗಳಿಂದ ಅನ್‌ಮೆಚ್ಯುರ್ಡ್‌ ನಾಯಕಿಯಂತೆ ವರ್ತಿಸಿದಳು ಎನ್ನುತ್ತಾರೆ ನಿರ್ದೇಶಕರೊಬ್ಬರು.

ಕೊನೆಯಲ್ಲಿ ಪ್ರೇಮಾ ಕೈಗೊಂಡಿರುವ ನಿರ್ಧಾರವೆಂದರೆ ಕಿರುತೆರೆ. ಆದರೆ ಅಲ್ಲೂ ನಿರಾಸೆಯಾಗಿಬಿಟ್ಟರೆ ಎಂಬ ಭಯದಿಂದ ಇನ್ನೂ ಕಾಲಿಡಲು ಹಿಂದು ಮುಂದು ಯೋಚಿಸುತ್ತಿದ್ದಾಳೆ. ಕಮಾನ್‌ ಪ್ರೇಮ.. ಕಮಾನ್‌.. ಇನ್ನೂ ನಿಮ್ಮ ಅಭಿಮಾನಿಗಳಿದ್ದಾರೆ. ಒಮ್ಮೆ ಸರಿಯಗಿ ಕಣ್ಬಿಟ್ಟು ನೋಡಿ. ನೀವು ಗೆಲ್ಲಬಲ್ಲಿರಿ ಎನ್ನುತ್ತಿದೆ ಅಭಿಮಾನಿ ಗುಂಪು. ಏನೇ ಆದರೂ ಒಳ್ಳೆಯದೇ ಆಗಲಿ ಎಂದು ಹಾರೈಸೋಣ ಅಲ್ಲವೇ?

English summary
Why Prema wont get chance..?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada