‘ಐಶ್ವರ್ಯ’ಳ ಧ್ಯಾನದಲ್ಲಿ ಇಂದ್ರಜಿತ್ ಮತ್ತು ಉಪೇಂದ್ರ!
ಸ್ಟೈಲಿಶ್ ಸ್ಟಾರ್ ನಿರ್ದೇಶಕ ಇಂದ್ರಜಿತ್ ಲಂಕೇಶ್‌ರ ಹೊಸ ಸಿನಿಮಾ ‘ಐಶ್ವರ್ಯ’ ತೆರೆಗೆ ಬರಲು ಸಿದ್ಧವಾಗಿದೆ. ಕೇವಲ 48 ದಿನಗಳಲ್ಲಿ ರೀಲ್ ಸುತ್ತಿದ್ದರೂ, ಚಿತ್ರ ಸಕತ್ತಾಗಿದೆ. ಚಿತ್ರದ ಯಶಸ್ಸಿನ ಬಗ್ಗೆ ನನಗಂತೂ ಯಾವುದೇ ಸಂಶಯಗಳಿಲ್ಲ ಎನ್ನುವ ವಿವರಣೆ ಇಂದ್ರಜಿತ್ ಅವರದು.
ಅವರಿಗೆ ಸಿನಿಮಾ ಮಾಡುವುದೂ ಗೊತ್ತು. ಚಿತ್ರಕ್ಕೆ ಅತಿ ಪ್ರಚಾರ ಪಡೆಯುವುದು ಗೊತ್ತು. ಗೆಲ್ಲುವುದು ಗೊತ್ತು. -ಈ ಮಾತಿಗೆ ತುಂಟಾಟ, ಲಂಕೇಶ್‌ಪತ್ರಿಕೆ, ಮೊನಾಲಿಸಾ ಚಿತ್ರಗಳ ಗೆಲುವೇ ಸಾಕ್ಷಿ. ಆ ಗೆಲುವು ‘ಐಶ್ವರ್ಯ’ದಲ್ಲಿ ರಿಪೀಟ್ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕು.
ಈ ಚಿತ್ರದಲ್ಲಿ ಉಪೇಂದ್ರ ಅವರ ಹೇರ್‌ಸ್ಟೈಲ್ ಬದಲಿಸಿರುವ ಇಂದ್ರಜಿತ್, ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದ್ದಾರೆ.
ಡೈಸಿ ಬೊಪ್ಪಣ್ಣ ಮತ್ತು ದೀಪಿಕಾ ಪಡುಕೋಣೆ ಎಂಬ ಮಿಂಚುಳ್ಳಿಗಳಿಂದಾಗಿ ಚಿತ್ರ, ಐಶ್ವರ್ಯ ರೈನಂತೆ ಮಿರುಗುಟ್ಟುತ್ತಿದೆ. ಬೆಂಗಳೂರಿನಿಂದ ಯುರೋಪ್‌ವರೆಗೆ ಕಂಡಕಂಡ ಸೌಂದರ್ಯವನ್ನೆಲ್ಲ, ಇಂದ್ರಜಿತ್ ಶೂಟ್ ಮಾಡುತ್ತಾ ಹೋಗಿದ್ದಾರೆ. ನಿರ್ಮಾಪಕರ ಡಾರ್ಲಿಂಗ್ ಎಂದೇ ಸ್ವಯಂ ಗುರ್ತಿಸಿಕೊಂಡಿರುವ ಇಂದ್ರಜಿತ್‌ಗೆ ಸದ್ಯಕ್ಕೆ ‘ಐಶ್ವರ್ಯ’ದೇ ಧ್ಯಾನ.
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications