»   » ಫಿಲ್ಮ್‌ಫೇರ್‌ ಖುಷಿಯಲ್ಲಿ ‘ಆಪ್ತಮಿತ್ರ’

ಫಿಲ್ಮ್‌ಫೇರ್‌ ಖುಷಿಯಲ್ಲಿ ‘ಆಪ್ತಮಿತ್ರ’

Posted By:
Subscribe to Filmibeat Kannada

ಚೆನ್ನೈ: ಕನ್ನಡದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸಿದ ‘ಆಪ್ತಮಿತ್ರ’ ಚಿತ್ರಕ್ಕೆ ಫಿಲಂಪೇರ್‌ ಪ್ರಶಸ್ತಿ ಸಂದಿದೆ.

ದಕ್ಷಿಣ ಭಾರತೀಯ ಚಿತ್ರಗಳಿಗೆ ಫಿಲ್ಮ್‌ಫೇರ್‌ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಕನ್ನಡದಲ್ಲಿ ‘ಆಪ್ತಮಿತ್ರ’ಅತ್ಯುತ್ತಮ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಷ್ಣುವರ್ಧನ್‌, ಸೌಂದರ್ಯ, ಪಿ.ವಾಸು, ಗುರುಕಿರಣ್‌ ಅವರುಗಳು ಕ್ರಮವಾಗಿ ಉತ್ತಮ ನಟ, ಉತ್ತಮ ನಟಿ, ಉತ್ತಮ ನಿರ್ದೇಶಕ, ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗಳು ಸಂದಿದೆ.

ಇತರೆ ಪ್ರಶಸ್ತಿ : ನಿರ್ಮಾಪಕ ರಾಮೋಜಿ ರಾವ್‌ ಮತ್ತು ನಟಿ ಕೆ.ಆರ್‌. ವಿಜಯಾ ಅವರನ್ನು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ತಮಿಳು ವಿಭಾಗದಲ್ಲಿ ‘ಆಟೋಗ್ರಾಫ್‌’, ತೆಲುಗು ವಿಭಾಗದಲ್ಲಿ ‘ವರ್ಷಂ’ ಮತ್ತು ಮಲಯಾಳಂ ವಿಭಾಗದಲ್ಲಿ ‘ಕಳಚ’ ಅತ್ಯುತ್ತಮ ಚಿತ್ರಗಳ ವಿಭಾಗದಲ್ಲಿ ಆಯ್ಕೆಗೊಂಡಿವೆ.

ಹೈದರಾಬಾದ್‌ನಲ್ಲಿ ಜುಲೈ 23ರಂದು ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada