»   » ತಮಿಳು ‘ಜೋಗಿ’ಗೆ ಜೋಡಿಯಾದ ರಮ್ಯಾ

ತಮಿಳು ‘ಜೋಗಿ’ಗೆ ಜೋಡಿಯಾದ ರಮ್ಯಾ

Subscribe to Filmibeat Kannada

ರಕ್ಷಿತಾ ಮದುವೆ ಗಲಾಟೆಯಲ್ಲಿದ್ದಾಳೆ... ರಕ್ಷಿತಾ ಮದ್ವೆ ವಿಷ್ಯ ಪತ್ರಿಕೆಗಳಲ್ಲಿ ಬಂದ ತಕ್ಷಣ ನಿರ್ಮಾಪಕರು, ಆಕೆ ಮನೆ ದಾರಿಯನ್ನು ಮರೆತಿದ್ದಾರೆ! ಇತ್ತ ರಕ್ಷಿತಾಳ ಒಂದು ಕಾಲದ ವೈರಿಯಾಗಿದ್ದ(ಈಗ ಗೆಳತಿಯರಂತೆ!)ರಮ್ಯಾಗೆ ಕೈತುಂಬ ಕೆಲಸ. ಈ ಮಧ್ಯೆ ಜೋಗತಿಯಾಗುವ ಅವಕಾಶ!

ಹೌದು, ಕಳೆದ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ‘ಜೋಗಿ’ ಚಿತ್ರ ತಮಿಳಿಗೆ ರೀಮೇಕ್‌ ಆಗುತ್ತಿದೆ. ಜೋಗಿ ಪಾತ್ರಧಾರಿ ಧನುಶ್‌ ಜೋಡಿಯಾಗಿ ರಮ್ಯಾ ನಟಿಸಲಿದ್ದಾರೆ. ಈ ಚಿತ್ರ ಗೆದ್ದರೆ, ರಮ್ಯಾ ಮೇಡಂ ಕನ್ನಡಕ್ಕೆ ಬರೋದು ಸ್ವಲ್ಪ ಅನುಮಾನವೇ?

ಅಂದ ಹಾಗೇ ತಮಿಳು ಚಿತ್ರರಂಗಕ್ಕೆ ರಮ್ಯಾ ಹೊಸಬರೇನಲ್ಲ... ಈ ಹಿಂದೆ ಸಿಲಂಬರಸನ್‌ ಜೊತೆ ‘ ಕುಟ್ಟು,’ ಮತ್ತು ಅರ್ಜುನ್‌ ಜೊತೆ ‘ಗಿರಿ’ ಚಿತ್ರದಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು. ಬಹುದಿನಗಳ ನಂತರ ‘ಜೋಗಿ’ ಮೂಲಕ ವಿಶಿಷ್ಟ ಪಾತ್ರದೊಂದಿಗೆ ರಮ್ಯಾ ರೀ ಎಂಟ್ರಿ ಪಡೆಯುತ್ತಿದ್ದಾರೆ. ತಮಿಳರು ಹೇಗೆ ಸ್ವೀಕರಿಸುವರೇ ಗೊತ್ತಿಲ್ಲ.

ಯಾರಿವ ಧನುಶ್‌? : ತಮಿಳು ಚಿತ್ರರಂಗದಲ್ಲಿ ಧನುಶ್‌ಗೆ ಅವರದೇ ಆದ ಅಭಿಮಾನಿ ಬಳಗವಿದೆ. ‘ಪುಡುಪ್ಪೆಟೈ’ ಚಿತ್ರದ ಯಶಸ್ಸಿನ ನಂತರ, ತಮ್ಮ ಗೆಲುವಿನ ಸರಣಿ ಮುಂದುವರೆಸಲು, ಧನುಶ್‌ ಕಣ್ಣಿಟ್ಟಿರುವುದು ‘ಜೋಗಿ’ ಮೇಲೆ. ಅವ ಕೈಹಿಡಿಯಲಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada