For Quick Alerts
  ALLOW NOTIFICATIONS  
  For Daily Alerts

  ಅರಮನೆ ಮೈದಾನದಲ್ಲಿ ಮುಂಗಾರು ಮಳೆಯ ಸಡಗರ

  By Staff
  |

  ಬೆಂಗಳೂರು : ಭಾನುವಾರ( ಜುಲೈ 08) ಸಂಜೆ ನಗರದ ಅರಮನೆ ಮೈದಾನದಲ್ಲಿ ಚಿತ್ರರಂಗದ ಖ್ಯಾತ ತಾರೆಯರು ಮುಂಗಾರು ಮಳೆಯಲ್ಲಿ ನೆನೆಯಲಿದ್ದಾರೆ.

  ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿ, ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ ಯೋಗರಾಜ್ ಭಟ್ಟರ ಮುಂಗಾರು ಮಳೆ ಚಿತ್ರಕ್ಕೆ ಈಗ ರಜತಹಬ್ಬದ ಸಂಭ್ರಮ.

  ಈ ರಜತೋತ್ಸವದಲ್ಲಿ ಅನೇಕ ರಾಜಕೀಯ ನಾಯಕರು, ಚಿತ್ರರಂಗದ ಖ್ಯಾತ ನಟ ,ನಟಿಯರು ಪಾಲ್ಗೊಳ್ಳುತ್ತಿದ್ದಾರೆ.

  ಆಹ್ವಾನಿತ ಅತಿಥಿಗಳ ಪಟ್ಟಿ:

  ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಮಂತ್ರಿ ಎಂ.ಪಿ. ಪ್ರಕಾಶ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ತಲ್ಲಂ ನಂಜುಡ ಶೆಟ್ಟಿ.

  ಶ್ರೀಮತಿ ಪಾರ್ವತಮ್ಮ ರಾಜಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಷ್, ಬಿ. ಸರೋಜ ದೇವಿ, ಲೀಲಾವತಿ, ಜಯಂತಿ, ಶಿವರಾಜ್ ಕುಮಾರ್, ರಾಕ್ ಲೈನ್ ವೆಂಕಟೇಶ್, ಸುದೀಪ್, ದರ್ಶನ್, ಪ್ರೇಮ್, ಉಪೇಂದ್ರ, ಪುನೀತ್ ರಾಜ್ ಕುಮಾರ್, ನಟ ಪ್ರೇಮ್ ಕುಮಾರ್,ನಾಗತಿಹಳ್ಳಿ ಚಂದ್ರಶೇಖರ್, ರಮ್ಯ, ಮುಂತಾದವರು.

  ಕಾರ್ಯಕ್ರಮದ ವಿಶೇಷ:

  ಹಿರಿಯ ಕಲಾವಿದರಾದ ನಟ ಕೆ.ಎಸ್.ಅಶ್ವಥ್ ಹಾಗೂ ಎಂ.ಪಿ. ಶಂಕರ್ ಅವರಿಗೆ ಆತ್ಮೀಯ ಸನ್ಮಾನ.

  ಯೋಗರಾಜ್ ಭಟ್ ಬರೆದಿರುವ ನೆನೆದಂತೆ ಮುಂಗಾರು ಮಳೆ ಹಾಗೇ ಸುಮ್ಮನೆ ಪುಸ್ತಕ ಅನಾವರಣ.

  ಸೋನು ನಿಗಮ್ ಬಂದರೆ, ಅನಿಸುತಿದೆ ಯಾಕೋ ..ಇಂದು ಹಾಡಿನ ಸಿಂಚನ.

  ಮನರಂಜನೆ:

  ಕನ್ನಡ ಚಿತ್ರ ಗೀತೆಗಳ ಗಾಯನ, ನಾಯಕ ನಟ ಗಣೇಶ್ ಹಾಗೂ ವಿಜಯ್ ಮುಂತಾದವರಿಂದ ವಿವಿಧ ಹಾಡುಗಳಿಗೆ ನರ್ತನ. ಸಾಗರದ ಮಹಿಳೆಯರ ತಂಡದಿಂದ ಡೊಳ್ಳು ಕುಣಿತ ನಡೆಯಲಿದೆ.

  ಮುಂಗಾರು ಮಳೆ ಚಿತ್ರ 41 ಕೇಂದ್ರಗಳಲ್ಲಿ ಶತಸಿನೋತ್ಸವವನ್ನು ಹಾಗೂ 25 ಕೇಂದ್ರಗಳಲ್ಲಿ ರಜತೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ತಂಡದ ಯಶಸ್ಸನ್ನು ಜನರೊಡನೆ ಹಂಚಿಕೊಳ್ಳಲ್ಲಿ ಮುಂಗಾರು ಮಳೆ ತಂಡ ಕಾತರದಿಂದ ಕಾದಿದೆ. ಬಳ್ಳಾರಿ ರಸ್ತೆಯ ಬದಿ ಗೇಟ್ ನಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X