»   » ಮತ್ತೆ ನೀ ಎಂದು ಬರುವೆ...

ಮತ್ತೆ ನೀ ಎಂದು ಬರುವೆ...

Posted By: Super
Subscribe to Filmibeat Kannada

'ಅಪ್ಪು" ಚಿತ್ರದ ಮೂಲಕ ಬೆಳಕಿಗೆ ಬಂದ ರಕ್ಷಿತಾ ಎನ್ನುವ ನವ ನಾಯಕಿ ಈಗ ಏನು ಮಾಡುತ್ತಿದ್ದಾಳೆ. ಆಕೆಯ ಹೊಸ ಕನ್ನಡ ಚಿತ್ರ ಯಾವುದು?

ಅಪ್ಪು ನಂತರ 'ಧಮ್‌" ಎನ್ನುವ ಚಿತ್ರದಲ್ಲಿ ರಕ್ಷಿತಾ ಅಭಿನಯಿಸಿರುವುದು ಈಗ ಹಳೆಯ ಕಥೆ. 'ಧಮ್‌" ಇನ್ನೂ ತೆರೆ ಕಂಡಿಲ್ಲ . ಆದರೆ, ಧಮ್‌ ನಂತರ ರಕ್ಷಿತಾಳನ್ನು ಸಿನಿಮಾದಲ್ಲಿ ನೋಡಲು ಕನ್ನಡ ಪ್ರೇಕ್ಷಕರು ಸಾಕಷ್ಟು ಸಮಯ ಕಾಯಬೇಕಿದೆ. ಅಂದರೆ, ರಕ್ಷಿತಾ ನೆರೆಯ ತೆಲುಗು ಚಿತ್ರರಂಗದಲ್ಲಿ ಬಿಜಿಯಾಗಿದ್ದಾಳೆ.

ಎಲ್ಲ ಸರಿಯಾಗಿದ್ದರೆ ಸುದೀಪನ ಹೊಸ ಸಿನಿಮಾ 'ನಂದಿ"ಯಲ್ಲಿ ರಕ್ಷಿತಾ ಅಭಿನಯಿಸಬೇಕಿತ್ತು . ಆದರೆ, ಆಕೆಯ ಬಳಿ ಡೇಟ್ಸ್‌ ಇರಲಿಲ್ಲ . ಆ ಕಾರಣದಿಂದಾಗಿ 'ನಂದಿ"ಗೆ ನಾಯಕಿಯಾಗುವ ಯೋಗ ಮಲಯಾಳಿ ಚೆಲುವೆಯಾಬ್ಬಳಿಗೆ ದೊರಕಿತು.

ಸದ್ಯಕ್ಕೆ ರಕ್ಷಿತಾ ತೆಲುಗಿನ 'ಈಡಿಯಟ್‌" ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ಹಾಡಿನ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್‌ಗೂ ಹಾರಿದ್ದಾಳೆ. ಅಲ್ಲಿಂದ ಬಂದ ನಂತರ ಸಾಕಷ್ಟು ಆಫರ್‌ಗಳು ಆಕೆಗಾಗಿ ಕಾಯುತ್ತಿವೆ. ಅಂದರೆ, 2002 ಪೂರಾ ವರ್ಷ ರಕ್ಷಿತಾ ತೆಲುಗು ಚಿತ್ರರಂಗದಲ್ಲೇ ಇರುತ್ತಾಳೆ. ಗೆಲುವು ದೊಡ್ಡದಾದರೆ ಈ ಅವಧಿಯೂ ಹಿಗ್ಗಬಹುದು. ಸೋತರೆ, ಹಳೆಯ ಗಂಡನ ಪಾದವೇ ಗತಿ ! ಪೂರಕ ಓದು

English summary
Rakshita is busy in Telugu movie. Her comeback to Kannada is not too near

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada