»   » ‘ಆಪ್ತಮಿತ್ರ’ನ ಸುವರ್ಣ ಸಂಭ್ರಮ

‘ಆಪ್ತಮಿತ್ರ’ನ ಸುವರ್ಣ ಸಂಭ್ರಮ

Subscribe to Filmibeat Kannada

ವಿಷ್ಣು ಮತ್ತು ದ್ವಾರಕೀಶ್‌ ಜೋಡಿಯ ‘ಆಪ್ತಮಿತ್ರ’ ಐವತ್ತು ವಾರಗಳ ಪ್ರದರ್ಶನ ಕಂಡಿದ್ದು, ಹಣ ಗಳಿಕೆಯಲ್ಲಿ ಸ್ಯಾಂಡಲ್‌ವುಡ್‌ನ ಇತ್ತೀಚಿನ ದಾಖಲೆಗಳನ್ನೆಲ್ಲ ಮುರಿದಿದೆ.

ಸತತ ಸೋಲುಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದ್ವಾರಕೀಶ್‌, ‘ಆಪ್ತಮಿತ್ರ’ನ ದಯೆಯಿಂದ ಈಗ ನೆಮ್ಮದಿಯ ಉಸಿರಾಡುತ್ತಿದ್ದಾರೆ. ರಾಜಧಾನಿ ಸೇರಿದಂತೆ ಮೈಸೂರಿನ ಎರಡು ಚಿತ್ರಮಂದಿರಗಳಲ್ಲಿ ಚಿತ್ರ ಸುವಣೋತ್ಸವದ ಸಂಭ್ರಮದಲ್ಲಿದೆ. ಈ ಮಧ್ಯೆ ಐದು ಫಿಲ್ಮ್‌ ಫೇರ್‌ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆಯೂ ಚಿತ್ರಕ್ಕಿದೆ.

ಅಮೆರಿಕಾ ಪ್ರವಾಸ ಮುಗಿಸಿಕೊಂಡು ಆ.11ರಂದು ಬೆಂಗಳೂರಿಗೆ ಮರಳುತ್ತಿರುವ ದ್ವಾರಕೀಶ್‌, ‘ಆಪ್ತಮಿತ್ರ’ನ ಸಂಭ್ರಮವನ್ನು ದೊಡ್ಡ ಸಮಾರಂಭದ ಮೂಲಕ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ಈ ಎಲ್ಲಾ ಸಂಭ್ರಮ ನೋಡಲು ನಟಿ ಸೌಂದರ್ಯ ನಮ್ಮೊಂದಿಗಿಲ್ಲ ಎನ್ನುವ ನೋವು ಪ್ರೇಕ್ಷಕರಲ್ಲಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada