»   » ಶ್ಯಾಮ್ ಬೆನೆಗಲ್ ಗೆ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ

ಶ್ಯಾಮ್ ಬೆನೆಗಲ್ ಗೆ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ

Posted By: Super
Subscribe to Filmibeat Kannada

ನವದೆಹಲಿ, ಆಗಸ್ಟ್ 08 : ಹೆಸರಾಂತ ನಿರ್ದೇಶಕ ಶ್ಯಾಮ್ ಬೆನೆಗಲ್ , 2005ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

72 ವರ್ಷದ ಬೆನೆಗಲ್ ಅನೇಕ ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ಮಂಥನ್, ಜುನೂನ್, ಅಂಕುರ್ ಮತ್ತಿತರ ಚಲನಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಬದುಕಿನ ಮೇಲೆ ಬೆಳಕು ಚೆಲ್ಲುವ ಬೋಸ್ಚಿತ್ರ, ಬೆನೆಗಲ್ ಅವರ ಇತ್ತೀಚಿನ ಚಿತ್ರ.

1970 ಮತ್ತು 1980ರ ದಶಕದಲ್ಲಿ ಹೊಸ ಅಲೆಯ ಚಿತ್ರಗಳಿಗೆ ನಾಂದಿಯಾಡಿದ ಶ್ಯಾಮ್ ಬೆನೆಗಲ್ , ಭಾರತೀಯ ಚಲನಚಿತ್ರ ರಂಗವನ್ನು ಶ್ರೀಮಂತಗೊಳಿಸಿದವರಲ್ಲಿ ಒಬ್ಬರು.

(ಏಜನ್ಸೀಸ್)

English summary
Shyam Benegal has won the prestigious Dada Saheb Phalke award for 2005.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada