»   » ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ

ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ

Subscribe to Filmibeat Kannada


1919, ಮೇ 13ರಂದು ಭಾರತೀಯರು, ಪವಾಡ ಕಂಡಂತೆ ಚಲನಚಿತ್ರ ವೀಕ್ಷಿಸಿದರು. ಧುಂಡಿರಾಜರು ಚಿತ್ರರಂಗಕ್ಕೆ ದಾದಾ(ಅಣ್ಣ) ಎಂದು ಕರೆಯಿಸಿಕೊಂಡು ದಾದಾಸಾಹೇಬ್ ಫಾಲ್ಕೆಯಾದರು.

ಭಾರತದ ಮೊಟ್ಟ ಮೊದಲ ಸಿನಿಮಾ ರಾಜಾಹರಿಶ್ಚಂದ್ರ ಚಿತ್ರದ ತಾರಾಮತಿ ಪಾತ್ರದಲ್ಲಿ ನಟಿಸಿದ ಮೊದಲ ಸಿನಿ ಹೀರೋಯಿನ್, ಮುಂಬಯಿಯ ಒಂದು ಹೋಟೆಲಿನಲ್ಲಿ ಅಡುಗೆಯ ಕೆಲಸಮಾಡುತ್ತಿದ್ದ ಚಿಗುರು ಮೀಸೆಯ ಒಬ್ಬ ಹುಡುಗ ಸಾಳುಂಕೆ. ಚಿತ್ರದುದ್ದಕ್ಕೂ ಚಂದ್ರಮತಿಯ ಚಿಗುರು ಮೀಸೆ ರಸಿಕರ ರೋಚಕ ದೃಷ್ಟಿಗೆ ಸಿಕ್ಕಿತ್ತು. 1913ರಲ್ಲಿ ಈ ಚಿತ್ರಕ್ಕಾಗಿ ಆತ ಪಡೆದ ಸಂಬಳ ತಿಂಗಳಿಗೆ 15 ರೂ.ಗಳು.

ಈ ಚಿತ್ರ ಭಾರತದ ಹಲವು ನಗರಗಳಲ್ಲೇ ಅಲ್ಲದೇ ಇಂಗ್ಲೆಂಡ್, ಬರ್ಮಾ, ಸಿಲೋನ್ ಮತ್ತು ಪೂರ್ವ ಆಫ್ರಿಕಾದಲ್ಲಿ ಪ್ರದರ್ಶಿತಗೊಂಡಿತು. 23 ದಿನಗಳ ಕಾಲ ಸತತ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿತು.

ಮುಂದೆ ದಾದಾ ಅವರು ನಿರ್ಮಿಸಿದ ಭಸ್ಮಾಸುರ ಮೋಹಿನಿ ಚಿತ್ರದಲ್ಲಿ ಮೊಟ್ಟ ಮೊದಲ ನಾಯಕಿಯರಾಗಿ ನಟಿಸಿದವರು, ದುರ್ಗಾಬಾಯಿ ಮತ್ತು ಕಮಲಾಬಾಯಿ ಗೋಖಲೆ.

ಚಿತ್ರರಸಿಕರ ತುಂಬು ಹೃದಯದ ಸ್ವಾಗತ ದಾದಾ ಅವರನ್ನು ಮೋಹಿನಿ ಭಸ್ಮಾಸುರ, ಸಾವಿತ್ರಿ ಸತ್ಯವಾನ್, ಸೇತುಬಂಧನ, ಚಂದ್ರಹಾಸ, ವಸಂತಸೇನಾ, ಕಚ-ದೇವಯಾನಿ, ಅಶ್ವತ್ಥಾಮ, ಮಾಳವಿಕಾಗ್ನಿಮಿತ್ರ ಚಿತ್ರಗಳನ್ನು ನಿರ್ಮಿಸಲು ಪ್ರೇರೇಪಿಸಿತು. ಜೊತೆಗೆ ಪಿತಾಚೆ ಪಂಚೆ, ಸೌಲಗ್ನ ರಸ ಎಂಬ ಕಿರು ಚಿತ್ರಗಳನ್ನೂ ವಿಚಿತ್ರ ಶಿಲ್ಪ, ಅನಿಮೇಟೆಡ್ ಕಾಯಿನ್ಸ್ ಮುಂತಾದ ಕಾರ್ಟೂನ್ ಚಿತ್ರಗಳನ್ನೂ ನಿರ್ಮಿಸಿದರು. ಇದೇ ಅಲ್ಲದೆ ಇನ್ನೂ ಹಲವಾರು ಸಾಕ್ಷ್ಯ ಚಿತ್ರಗಳನ್ನೂ ನಿರ್ಮಿಸಿದರು.

***

ಅಂದಿನ ಚಿತ್ರಗಳು ಮೂಕಿ ಚಿತ್ರಗಳು. ಅಂದಿನ ದಿನಗಳಲ್ಲಿ ಚಿತ್ರ ನಡೆಯುವಾಗ ದೃಶ್ಯ ಸಂಯೋಜನೆಗೆ ತಕ್ಕ ಹಾಗೆ ಪರದೆಯ ಪಕ್ಕದಲ್ಲಿ ವಾದ್ಯವೃಂದ ಕೂಡುತ್ತಿತ್ತು. ಮತ್ತೊಬ್ಬರು ಗಟ್ಟಿಧ್ವನಿಯಿಂದ ಕಥೆಯನ್ನು ಪ್ರಾದೇಶಿಕ ಭಾಷೆಯಲ್ಲಿ ನಿರೂಪಣೆ ಮಾಡುತ್ತಿದ್ದರು.

ಫಾಲ್ಕೆ ಅವರ ಕೀರ್ತಿ ಎಲ್ಲೆಡೆ ಹರಡಿತು. ಹಣಕ್ಕೆ ತೊಂದರೆ ಇರಲಿಲ್ಲ. 1914ರಲ್ಲಿ ಲಂಡನಿನ್ನಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶಿಸಲು ಪ್ರಯಾಣ ಮಾಡಿದರು. ಈ ಬಾರಿ ಸೋಲು ಕಾದಿತ್ತು, ವಿಧಿ ಬೇರೆ ಆಟ ಆಡಿತು. ಜಗತ್ತಿನ ಬಲಿಷ್ಠ ರಾಷ್ಟ್ರಗಳು ಇಬ್ಬಾಗವಾಗಿ ಯುದ್ಧ ಘೋಷಿಸಿದ್ದವು. ಫಾಲ್ಕೆಯವರ ಅದೃಷ್ಟ ನೀರು ಪಾಲಾಯಿತು. ಕಷ್ಟ ಕಾಲ ಶುರುವಾಯಿತು. 1917ರಲ್ಲಿ ಹಾಗೂಹೀಗೂ ಹಣಕೂಡಿಸಿ ಲಂಕಾದಹನ ನಿರ್ಮಿಸಿದರು. ಲಂಕಾದಹನ ಫಾಲ್ಕೆ ಅವರ ಕಷ್ಟದಹನವೂ ಆಯಿತು. ಈ ಚಿತ್ರ ನೋಡಲು ದೂರ ದೂರದ ಊರುಗಳಿಂದ ಜನ ಹಿಂಡು ಹಿಂಡಾಗಿ ಬಂದರಂತೆ.

ಹಣ ಕೂಡಿದಂತೆ ಸಂಸ್ಥೆಯೂ ಬೆಳೆಯಿತು. ಪಾಲುದಾರರೂ ಕೂಡಿಕೊಂಡು 1917ರಲ್ಲಿ ಹಿಂದೂಸ್ತಾನ್ ಫಿಲ್ಮ್ ಕಂಪನಿ ಪ್ರಾರಂಭಗೊಂಡಿತು. ಶ್ರೀಕೃಷ್ಣ ಜನ್ಮ, ಕಾಳಿ ಮರ್ಧನ, ಅಹಲ್ಯಾ ಉದ್ದಾರ್, ಉಷಾಸ್ವಪ್ನಾ ಚಿತ್ರಗಳು ಮೂಡಿಬಂದವು. ಪಾಲುದಾರರ ಜೊತೆ ಮತ್ತೆ ವೈಮನಸ್ಯ, ಮನಸ್ತಾಪ, ಭಿನ್ನಾಭಿಪ್ರಾಯಗಳು ತಲೆದೂರಿ ಫಾಲ್ಕೆಯವರು ವಾರಣಾಸಿಗೆ ತೆರಳಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada