ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ

By Staff

ಸುಮಾರು ಮೂರು ವರುಷಗಳ ನಂತರ ಫಾಲ್ಕೆಯವರು ಮತ್ತೆ ಕಂಪನಿಗೆ ಮರಳಿ, 1932ರ ವರೆಗೂ ಕಾರ್ಯ ನಿರ್ವಹಿಸಿದರು. ಇಷ್ಟರಲ್ಲಿ ಫಾಲ್ಕೆ ಅವರಿಗೆ 62 ವರುಷಗಳಾಗಿತ್ತು. ನಿವೃತ್ತರಾಗಲು ನಿರ್ಧಾರ ಮಾಡಿದರು. ಕೊಡುಗೈ ದಾನಿಯಾಗಿದ್ದ ಅವರ ಬಳಿ ಮುಂದಿನ ಜೀವನಕ್ಕೆ ಹಣವಿರಲಿಲ್ಲ. ಬಂದ ಹಣವೆಲ್ಲಾ ಚಿತ್ರರಂಗದ ಅಭಿವೃದ್ಧಿಗೆ ಖರ್ಚಾಗಿತ್ತು. 1934ರ ವೇಳೆಗೆ ಉದ್ಯೋಗವಿಲ್ಲದೆ ಹೋಯಿತು. ಈವೇಳೆಗಾಗಲೇ ದೇಹ ಕುಗ್ಗಿತ್ತು. ಬಡತನ ಕಾಡಿತ್ತು.

ಚಿತ್ರರಂಗಕ್ಕೆ ಸತತವನ್ನೂ ಎರೆದ ಜೀವಕ್ಕೆ ಮುಪ್ಪಿನಲಿ ಕಷ್ಟ ಪಡುವ ಕಾಲ ಬಂದಿತ್ತು. ನಿರಾಸಕ್ತಿ, ವೇದನೆ, ಬಡತನ, ದಿನದ ಊಟಕ್ಕೂ ಪರದಾಡುವ ಕಾಲ ಬಂದಿತು. ಈ ಸ್ಥಿತಿಯಲ್ಲಿಯೇ 1944 ಫೆಬ್ರವರಿ 16ರಂದು ನಾಸಿಕ್ ನಲ್ಲಿ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಕೊನೆಯುಸಿರೆಳೆದರು.

***

ಸಾಯುವುದಕ್ಕೆ ಮುನ್ನ ಅವರ ಸಂದರ್ಶನಕ್ಕೆ ಬಂದ ಪತ್ರಿಕೆಯವರಿಗೆ ಫಾಲ್ಕೆಯವರು ನೋವಿನಿಂದ "ಯಾವ ಕ್ಷೇತ್ರಕ್ಕಾಗಿ ನನ್ನ ಸಮಸ್ತವೆಲ್ಲವನ್ನೂ ಧಾರೆ ಎರೆದೆನೋ ಅದೇ ನನ್ನನ್ನು ದೂರ ಮಾದಿದೆ. ಆ ಕ್ಷೇತ್ರ ನನ್ನನ್ನು ಮರೆತಿದೆ, ಅದಕ್ಕೆ ನಾನು ಬೇಡವಾಗಿದ್ದೇನೆ. ಮರೆಯುವುದೇ ಜಗತ್ತಿನ ರೀತಿ. ಮರೆತ ನನ್ನನ್ನು ನೀವೇನು ಸಂದರ್ಶನ ಮಾಡುವಿರಿ. ದಾದಾನನ್ನು ನೀವೂ ಮರೆತುಬಿಡಿ" ಎಂದು ವಾಪಸ್ ಕಳಿಸಿದರಂತೆ. ನೂರಾರು ಜನರಿಗೆ ಉದ್ಯೋಗ ನೀಡಿ, ಊಟ ಹಾಕಿದ ಕೈಗೆ ಒಂದು ತುತ್ತು ಅನ್ನಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಬಂದಿತಲ್ಲಾ..ವಿಧಿ ವಿಪರೀತ ಎನ್ನುವುದು ಇದಕ್ಕೇ ಅಲ್ಲವೇ?

1939ರಲ್ಲಿ ನಡೆದ ಭಾರತೀಯ ಚಲನಚಿತ್ರೋದ್ಯಮದ ಬೆಳ್ಳಿ ಮಹೋತ್ಸವದ ಸಮಾರಂಭದಲ್ಲಿ, ಭಾರತೀಯ ಚಿತ್ರದ ಮೂಲ ಪುರುಷ ಫಾಲ್ಕೆಯವರನ್ನು ಸನ್ಮಾನಿಸಿ ಐದು ಸಾವಿರ ರೂ.ಗಳನ್ನಿತ್ತು ಸನ್ಮಾನಿಸಿದರು. ಇದನ್ನು ಬಿಟ್ಟರೆ ಚಿತ್ರರಂಗದ ಪಿತಾಮಹನನ್ನು ಚಲನಚಿತ್ರ ಜಗತ್ತು ಸಂಪೂರ್ಣ ಮರೆತೇ ಬಿಟ್ಟಿತ್ತು.

ಅಂತೂ ದಾದ ಅವರು ನಿಧನ ಹೊಂದಿದ 25 ವರುಷಗಳ ತರುವಾಯ ಭಾರತ ಸರಕಾರ ದಾದಾ ಅವರ ಸ್ಮರಣೆಗಾಗಿ, 1969ರಿಂದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲು ಪ್ರಾರಂಭಿಸಿತು. ಈ ಪ್ರಶಸ್ತಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳ ಸ್ವಹಸ್ತದಿಂದ ವಿತರಿಸಲ್ಪಡುತ್ತದೆ. ಚಿನ್ನದಪದಕ, ಪ್ರಶಸ್ತಿ ಪತ್ರ, ಒಂದು ಲಕ್ಷ ರೂ ನಗದನ್ನು ಪ್ರಶಸ್ತಿ ಒಳಗೊಂಡಿರುತ್ತದೆ.

ರೀಲಿನ ಪ್ರಪಂಚ ವೀಕ್ಷಿಸಿ ಆನಂದ ಪಡುವ ನಾವು, ರಿಯಲ್ ಆಗಿ ಮಹಾನ್ ವ್ಯಕ್ತಿ ದಾದಾ ಸಾಹೇಬ್ ಫಾಲ್ಕೆ ಅವರಿಗೆ ನಮಿಸೋಣ.

(ಫೋಟೋ-ಮಾಹಿತಿ-ಗೂಗಲ್‌ನಿಂದ ಸಂಗ್ರಹಿಸಿದ್ದು).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X