»   » ಟಾಪ್ 5 : ನಿಲ್ಲದ ಮಳೆಯಿಂದ ದಣಿಯದ ಅರಸು ತನಕ!

ಟಾಪ್ 5 : ನಿಲ್ಲದ ಮಳೆಯಿಂದ ದಣಿಯದ ಅರಸು ತನಕ!

Subscribe to Filmibeat Kannada


1. ಮುಂಗಾರು ಮಳೆ : 25ವಾರ ಪೂರೈಸಿದರೂ, ಹಣದ ಮಳೆ ನಿಂತಿಲ್ಲ. ಮುಂಗಾರು ಮಳೆ ಚಿತ್ರಕ್ಕೆ ಸ್ಪರ್ಧೆಯೊಡ್ಡುವಂತೆ ಗಣೇಶ್ ರ ಹುಡುಗಾಟ ಮತ್ತು ಚೆಲುವಿನ ಚಿತ್ತಾರ ಚಿತ್ರಗಳಿದ್ದರೂ, ಮುಂಗಾರು ಮಳೆ ತಗ್ಗಿಲ್ಲ. ಚಿತ್ರ ಒಂದು ವರ್ಷ ಪೂರೈಸುವ ಓಡುವ ಸಾಧ್ಯತೆಗಳಿವೆ.

2. ದುನಿಯಾ : ಮಚ್ಚು ಲಾಂಗಿನ ಕತೆಯಾದರೂ, ಚಿತ್ರ ಕೌಟುಂಬಿಕ ರೂಪ ಪಡೆದಿದೆ. ಮನೆಮಂದಿ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಈಗಾಗಲೇ ಚಿತ್ರ ಸೆಂಚುರಿ ಪೂರೈಸಿದೆ.

3. ಸಂತ : ನಟ ಶಿವರಾಜ್ ಕುಮಾರ್ ಸೋಲಿನಿಂದ ಕಂಗೆಟ್ಟಿದ್ದರು. ಈ ಮಧ್ಯೆ, ಸಂತಗೆದ್ದಿದೆ. ಆರಂಭದಲ್ಲಿ ಚಿತ್ರ ಕುಂಟಿದರೂ, ನಂತರ ಸುಧಾರಿಸಿಕೊಂಡಿದೆ. ಒಂದು ಹಂತದ ಗಳಿಕೆ ಮುಂದುವರೆದಿದೆ.

4. ಪಲ್ಲಕ್ಕಿ : ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ. ಪ್ರೇಕ್ಷಕರ ಅಭಿಪ್ರಾಯ ಏನೇ ಇರಲಿ. ನಿರ್ಮಾಪಕರು ಖುಷಿಯಲ್ಲಿದ್ದಾರೆ. ಮೊದಲ 3ವಾರಗಳಲ್ಲಿಯೇ ಬಂಡವಾಳ ವಾಪಸ್ ಬಂದಿದೆ ಎನ್ನಲಾಗಿದೆ. ಕಡಿಮೆ ಬಜೆಟ್ ನ ಈ ಚಿತ್ರ ಗೆಲ್ಲಲು ಏಕೈಕ ಕಾರಣ; ನೆನಪಿರಲಿ ಪ್ರೇಮ್ ಸುತ್ತಳಿನ ಪ್ರಭಾವಳಿ!

5. ಅರಸು : ಪುನೀತ್ , ರಮ್ಯಾ ಮತ್ತು ಮೀರಾ ಜಾಸ್ಮಿನ್ ಅಭಿನಯದ ಚಿತ್ರ ರಾಜ್ಯದ ಪ್ರಮುಖ ನಗರಗಳು ಸೇರಿದಂತೆ ಬಿ ಮತ್ತು ಸಿ ಕೇಂದ್ರದಲ್ಲಿ ಮುನ್ನಡೆ ಸಾಧಿಸಿದೆ. ನೂರು ದಿನಗಳನ್ನು ಇತ್ತೀಚೆಗೆ ಚಿತ್ರ ಪೂರೈಸಿದೆ..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada