»   » ಅಮಿತಾಬ್‌ ಬಚ್ಚನ್‌ ಹೊಸ ಅವತಾರ ಟ್ರ್ಯಾಕ್ಟರ್‌ ಡ್ರೆೃವರ್‌ !

ಅಮಿತಾಬ್‌ ಬಚ್ಚನ್‌ ಹೊಸ ಅವತಾರ ಟ್ರ್ಯಾಕ್ಟರ್‌ ಡ್ರೆೃವರ್‌ !

Posted By: Super
Subscribe to Filmibeat Kannada

ಜೈಪುರದ ಜಮೀನಿನಲ್ಲಿ ಅಮಿತಾಬ್‌ ಬಚ್ಚನ್‌ ಟ್ರ್ಯಾಕ್ಟರ್‌ ಓಡಿಸುತ್ತಿದ್ದರೆ, ಸುತ್ತ ಅಭಿಮಾನಿಗಳ ಸಮೂಹ.
ಅರೆರೆ ಇದೇನು, ಬಚ್ಚನ್‌ ಐಷಾರಾಮಿ ಜೀವನ ಬಿಟ್ಟು ಉಳುಮೆಗೆ ಇಳಿದಿದ್ದಾರಾ ಅಂದುಕೊಳ್ಳಬೇಡಿ. ಅದು ಬೀಗರ ಉದ್ಧಾರಕ್ಕಾಗಿ ಅಮಿತಾಬ್‌ ಮಾಡುತ್ತಿರುವ ಟ್ರ್ಯಾಕ್ಟರ್‌ ಸಂಚಾರ. ಅವರ ಸಂಚಾರ ಕೆಮೆರಾದಲ್ಲಿ ದಾಖಲಾಗುತ್ತಿತ್ತು. ತಮ್ಮ ಮಗಳ ಮಾವ ನಂದಾ ಅವರ ಕೋರಿಕೆಯ ಮೇರೆಗೆ ಎಸ್ಕಾರ್ಟ್ಸ್‌ ಜಾಹೀರಾತಿಗಾಗಿ ಅಮಿತಾಬ್‌ ಈ ಟ್ರ್ಯಾಕ್ಟರ್‌ ಸಂಚಾರ ಮಾಡಿದ್ದು.

ಅಂದಹಾಗೆ, ಬಚ್ಚನ್‌ ಧರಿಸಿದ್ದ ರೈತನ ದಿರಿಸು ವೈನಾಗಿತ್ತು. ಬರದ ಹೊಡೆತ ತಿಂದ ಈ ಹೊತ್ತಲ್ಲಿ ದಟ್ಟಿ ಪಂಚೆ ಉಡೋದೂ ಕಷ್ಟ ಎಂಬಂಥಾ ಸ್ಥಿತಿಯಲ್ಲಿ ರೈತನಿದ್ದರೆ, ನಮ್ಮ ಬಚ್ಚನ್‌ ಅದಕ್ಕೆ ತದ್ವಿರುದ್ಧ ಗೆಟ್‌ಅಪ್‌ನಲ್ಲಿದ್ದರು. ಚೂಡಿದಾರ್‌ ಪಾಯಿಜಾಮಾ, ಉದ್ದದ ನಿಲುವಂಗಿಯಲ್ಲಿ ಬಚ್ಚನ್‌ ಮಿರಿಮಿರಿ ಮಿಂಚುತ್ತಿದ್ದರು. ಅಂದಹಾಗೆ, ಟ್ರ್ಯಾಕ್ಟರ್‌ ಸಂಚಾರ ನಡೆದದ್ದು ಒರಿಜಿನಲ್‌ ಉಳುವರಿ ಭೂಮಿ ಮೇಲಲ್ಲ ; ಜೈಪುರದ ಚೋಕಿ ದಾನಿ ರೆಸಾರ್ಟಿನಲ್ಲಿ ಹಾಕಿದ್ದ ಭಾರೀ ಸೆಟ್‌ನಲ್ಲಿ !

ಅಂದಹಾಗೆ, ಈ ಜಾಹೀರಾತಿನ ನಿರ್ದೇಶಕ 'ಅಕ್ಸ್‌ " ಫೇಮ್‌ನ ರಾಕೇಶ್‌ ಮೆಹ್ರಾ. ಹೆಸರು ಮಾಡಿರುವ ಬಿನೋದ್‌ ಪ್ರಧಾನ್‌ ಛಾಯಾಗ್ರಾಹಕ. ಅಂದಮೇಲೆ ಒಂದು ಸಿನಿಮಾ ಹಾಡಿಗಿಂತ ಹೆಚ್ಚು ಖರ್ಚು ಈ ಜಾಹೀರಾತಿಗೆ ಆಗಿರುವುದು ಖರೆ.

ಜಾಹೀರಾತಿನ ಸೆಟ್ಟಲ್ಲಿ ಜನರೆಲ್ಲಾ ಹೆಚ್ಚು ನೋಡಿದ್ದು ಎರಡು ವರ್ಷದ ಹೆಣ್ಣು ಮಗುವನ್ನು. ಅಮಿತಾಬ್‌ ಎತ್ತಿಕೊಂಡರೂ ಗೋಳೋ ಎನ್ನುತ್ತಿದ್ದ ಮಗು ಚಾಕೊಲೇಟ್‌, ಐಸ್‌ ಕ್ರೀಂಗೆಲ್ಲಾ ಜಗ್ಗಲಿಲ್ಲ. ಅಮ್ಮನ ಮಡಿಲಿಗೆ ಹೋದಾಗ ಮಾತ್ರ ಅದು ಸುಮ್ಮನಾಗುತ್ತಿತ್ತು. ಕೊನೆಗೂ ಆ ಮಗುವನ್ನು ಜಾಹೀರಾತು ಚಿತ್ರೀಕರಣದಲ್ಲಿ ಬಳಸಿಕೊಂಡದ್ದು ಒಂದು ಪವಾಡವೇ ಆದಂತಾಯಿತು.

ಇನ್ನೊಂದು ವಿಷಯ- ಸಾಕಷ್ಟು ಸಿನಿಮಾ ಹಾಗೂ ಜಾಹೀರಾತುಗಳು ಹುಡುಕಿಕೊಂಡು ಬರುತ್ತಿರುವುದರಿಂದ ಬಚ್ಚನ್‌ ಮಾಡಿದ್ದ ಸಾಲ ಕಂಡಾಪಟ್ಟೆ ಕರಗಿದೆಯಂತೆ. 'ಕೌನ್‌ ಬನೇಗಾ ಕರೋಡ್‌ಪತಿ"ಗೆ ಧನ್ಯವಾದಗಳು.

English summary
Bachchan takes to driving tractors in Jaipur. All for the sake of Samdhi !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada