‘ಲಂಕೇಶ್‌ಪತ್ರಿಕೆ’ ವಿರುದ್ಧ ಪಾರ್ವತಮ್ಮ ರಾಜ್‌ಕುಮಾರ್‌ ಕೋರ್ಟಿಗೆ

By Staff

ಬೆಂಗಳೂರು : ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಆಧಾರ ರಹಿತ ಹಾಗೂ ಸುಳ್ಳು ಸುದ್ದಿಗಳನ್ನು ‘ಲಂಕೇಶ್‌ ಪತ್ರಿಕೆ’ ಪ್ರಕಟಿಸಿದ್ದು , ಪತ್ರಿಕೆಯ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಬೇಕು ಎಂದು ವರನಟ ರಾಜ್‌ಕುಮಾರ್‌ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್‌ ಸೋಮವಾರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು.

ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ವಿರುದ್ಧ ‘ಲಂಕೇಶ್‌ ಪತ್ರಿಕೆ’ ಆಧಾರ ರಹಿತ ಸುದ್ದಿಗಳನ್ನು ಪ್ರಕಟಿಸಿದೆ. ಈ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಪಾರ್ವತಮ್ಮ ರಾಜ್‌ಕುಮಾರ್‌ ಆಪಾದಿಸಿದ್ದು - ‘ಲಂಕೇಶ್‌ ಪತ್ರಿಕೆ’ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸೆ.8ರ ಸೋಮವಾರ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ದೂರು ಸಲ್ಲಿಸಿದರು. ಪಾರ್ವತಮ್ಮನವರೊಂದಿಗೆ ಅವರ ಪುತ್ರ ರಾಘವೇಂದ್ರ ರಾಜ್‌ಕುಮಾರ್‌ ನ್ಯಾಯಾಲಯದಲ್ಲಿ ಹಾಜರಿದ್ದರು.

‘ಲಂಕೇಶ್‌ ಪತ್ರಿಕೆ’ ಉದ್ದೇಶಪೂರ್ವಕವಾಗಿ ತಮ್ಮ ಕುಟುಂಬದ ತೇಜೋವಧೆಗೆ ಪ್ರಯತ್ನಿಸುತ್ತಿದೆ ಎಂದು ಪಾರ್ವತಮ್ಮ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಸೆ.9ರ ಮಂಗಳವಾರವೂ ನ್ಯಾಯಾಲಯಕ್ಕೆ ಹಾಜರಾಗುವ ಪಾರ್ವತಮ್ಮ , ನ್ಯಾಯಾಲಯದಲ್ಲಿ ತಮ್ಮ ದೂರಿನ ಕುರಿತು ಹೇಳಿಕೆ ನೀಡುವರು.

ಲಂಕೇಶ್‌ ಪತ್ರಿಕೆ ಬರೆದಿರುವುದೇನು?

ಕಳೆದೆರಡು ವಾರಗಳಿಂದ ‘ಲಂಕೇಶ್‌ ಪತ್ರಿಕೆ’ ಪಾರ್ವತಮ್ಮ ಹಾಗೂ ಕುಟುಂಬದ ಸದಸ್ಯರ ಕುರಿತು ವಿವಿಧ ಲೇಖನಗಳನ್ನು ಪ್ರಕಟಿಸಿದೆ. ಈ ಲೇಖನಗಳಲ್ಲಿ -

  • ಕನ್ನಡ ಚಿತ್ರರಂಗವನ್ನು ಪಾರ್ವತಮ್ಮ ರಾಜ್‌ಕುಮಾರ್‌ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
  • ಪಾರ್ವತಮ್ಮ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ.
  • ಪುಟ್ಟಣ್ಣ ಚಿತ್ರಮಂದಿರದಿಂದ ‘ಪ್ರೀತಿ ಪ್ರೇಮ ಪ್ರಣಯ’ದ ಎತ್ತಂಗಡಿ ಪ್ರಯತ್ನದಲ್ಲಿ ಪಾರ್ವತಮ್ಮನವರ ಕೈವಾಡವಿತ್ತು .
  • ಸೇವಾಶುಲ್ಕ ರದ್ದಿಗಾಗಿ ನಡೆದ ಹೋರಾಟ ಪಾರ್ವತಮ್ಮನವರ ಸ್ವಾರ್ಥಕ್ಕಾಗಿ ನಡೆದದ್ದು .
  • ಪ್ರದರ್ಶಕರ ಸಂಘದ ಸಿನಿಮಾ ಬಂದ್‌ ಸಂದರ್ಭದಲ್ಲಿ ಪಾರ್ವತಮ್ಮ ನಿರ್ಮಾಪಕರ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದರು. ಚಿತ್ರರಂಗದ ಬಂದ್‌ಗೆ ಒತ್ತಾಯಿಸಿದರು. ಹೀಗೆ ಮಾಡಲು ಪಾರ್ವತಮ್ಮನವರಿಗೆ ಯಾವ ಅಧಿಕಾರವಿದೆ?
  • ಪುನೀತ್‌ ತೆಲುಗು ನಿರ್ಮಾಪಕರಿಗೆ ಕಾಲ್‌ಷೀಟ್‌ ನೀಡುವ ಮೂಲಕ- ರಾಜ್‌ ಕುಟುಂಬ ತೆಲುಗಿಗೆ ವಲಸೆ ಹೊರಟಿದೆ !
  • ಇತ್ಯಾದಿ...
(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X