»   » ಆನೆ ಬಂತೊಂದಾನೆ.. ಇದು ‘ಕೃಷ್ಣೇಗೌಡನ ಆನೆ’!

ಆನೆ ಬಂತೊಂದಾನೆ.. ಇದು ‘ಕೃಷ್ಣೇಗೌಡನ ಆನೆ’!

Subscribe to Filmibeat Kannada

‘ಮೋಹಿನಿ’ ಗೆಲುವಿನಿಂದ ಖುಷಿಯಲ್ಲಿರುವ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ತಮ್ಮ ಮುಂದಿನ ಚಿತ್ರಕ್ಕೆ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ನೀಳ್ಗತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದ ನಾಯಕ ಜಗ್ಗೇಶ್‌.

ಪತ್ರಿಕೆಯಾಂದರಲ್ಲಿ ಧಾರಾವಾಹಿಯಾಗಿ ಮೂಡಿಬಂದ ‘ಕೃಷ್ಣೇಗೌಡನ ಆನೆ’ ಸಿನಿಮಾ ಆಗುತ್ತಿದೆ. ಚಿತ್ರದ ಚಿತ್ರೀಕರಣ ಸೆ.10ರಂದು ಆರಂಭಗೊಳ್ಳಲಿದೆ. ತೀರ್ಥಹಳ್ಳಿ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ಪೂರೈಸಲು ಬಾಬು ಯೋಜನೆ ರೂಪಿಸಿದ್ದಾರೆ.

ತೀರ್ಥಹಳ್ಳಿಗೂ ಬಾಬೂಗೂ ಬಿಡದ ನಂಟು. ತಮ್ಮ ಹಿಂದಿನ ‘ಮುಂಗಾರಿನ ಮಿಂಚು’ ಚಿತ್ರದಲ್ಲಿ ಮಲೆನಾಡಿನ ಚೆಲುವು, ಮಳೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು. ‘ಕೃಷ್ಣೇಗೌಡನ ಆನೆ’ ಪ್ರೇಕ್ಷಕರನ್ನು ರಂಜಿಸುವಲ್ಲಿ ಅನುಮಾನವೇ ಇಲ್ಲ ಎನ್ನುವ ವಿಶ್ವಾಸ ಬಾಬು ಅವರಲ್ಲಿದೆ. ಚಿತ್ರದ ಪ್ರಮುಖ ಪಾತ್ರಧಾರಿಯಾದ ಬೃಹತ್‌ ಆನೆಯನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ.

‘ಮಠ’, ‘ಹನಿಮೂನ್‌ ಎಕ್ಸ್‌ಪ್ರೆಸ್‌’ ಮತ್ತಿತರ ಸಿನಿಮಾಗಳು ಗೆದ್ದರೂ, ಜಗ್ಗೇಶ್‌ ಮತ್ತೆ ಗಾಂಧಿನಗರದಲ್ಲಿ ಬಿಜಿಯಾಗಲಿಲ್ಲ. ಅವರಿಗೀಗ ‘ಕೃಷ್ಣೇಗೌಡನ ಆನೆ’ ಮೇಲೆ ಭರವಸೆ. ಹಂಸಲೇಖ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

Post your views
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada